Friday, June 5, 2026
Homeಕರಾವಳಿಮಂಗಳೂರುಸುಬ್ರಮಣ್ಯ; ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಜೀಪ್ ಚಾಲಕರ...

ಸುಬ್ರಮಣ್ಯ; ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಜೀಪ್ ಚಾಲಕರ ಬಂಧನ

- Advertisement -
- Advertisement -

ಸುಬ್ರಮಣ್ಯ; ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಜೀಪ್ ಚಾಲಕರನ್ನು ಬಂಧಿಸಲಾಗಿದೆ.

ಸಕಲೇಶಪುರ ತಾಲೂಕಿನ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ದಕ್ಷಿಣ ಕ‌ನ್ನಡ ಜಿಲ್ಲೆಯ ಪ್ರವಾಸಿಗರ ಮೇಲೆ ಜೂನ್ 23 ರಂದು ಹಲ್ಲೆ ನಡೆದಿತ್ತು. ಬೈಕ್ ನಲ್ಲಿ ತೆರಳಿದ್ದ ಪ್ರವಾಸಿಗರ ಮೇಲೆ ಸ್ಥಳೀಯ ಜೀಪ್ ಚಾಲಕರು ಹಲ್ಲೆ  ಮಾಡಿದ್ದರು.ಪಿಕಪ್ ವಾಹನಗಳನ್ನು ಬಾಡಿಗೆಗೆ ಪಡೆದು ತೆರಳದೇ ಯುವಕರು ತಮ್ಮದೇ ಬೈಕ್ ಗಳಲ್ಲಿ ತೆರಳಿದ್ದಕ್ಕೆ ಪ್ರಶ್ನೆ ಮಾಡಿ ಜೀಪ್ ಚಾಲಕರು ಹಲ್ಲೆ ಮಾಡಿದ್ದರು

ಈ ಬಗ್ಗೆ ದಕ್ಷಿಣ ಕನ್ನಡ ಮೂಲದ ಪ್ರವಾಸಿಗ ಭುವಿತ್ ಪೂಜಾರಿ ಎಂಬವರು ಪೊಲೀಸ್ ದೂರು ದಾಖಲಿಸಿದ್ದು, ಹಲ್ಲೆ ಆರೋಪಿಗಳಾದ ಗಗನ್, ಕಿರಣ್, ನಿಶಾಂತ್ ಮತ್ತು  ಮದನ್ ಎಂಬುವವರ ಮೇಲೆ ಯಸಳೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಪ್ರಕರಣ ದಾಖಲಿಸಿಕೊಂಡಿದ್ದ ಯಸಳೂರು ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಜೀಪ್ ಚಾಲಕರು ಇದೇ ರೀತಿ ಪುಂಡಾಟ ಮೆರೆಯುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!