Friday, June 5, 2026
Homeಕರಾವಳಿಮಂಗಳೂರುಮಂಗಳೂರು: ದಾರಿ ವಿಚಾರಕ್ಕೆ ವಕೀಲ ದಂಪತಿ ಮೇಲೆ ಹಲ್ಲೆ; ಮಾನಭಂಗ ಯತ್ನದ ಆರೋಪ

ಮಂಗಳೂರು: ದಾರಿ ವಿಚಾರಕ್ಕೆ ವಕೀಲ ದಂಪತಿ ಮೇಲೆ ಹಲ್ಲೆ; ಮಾನಭಂಗ ಯತ್ನದ ಆರೋಪ

- Advertisement -
- Advertisement -

ಮಂಗಳೂರು: ದಾರಿ ವಿಚಾರದಲ್ಲಿ ಗಲಾಟೆ ನಡೆದು ವಕೀಲ ದಂಪತಿ ಮೇಲೆ ಹಲ್ಲೆ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜೆಪ್ಪಿನಮೊಗರು ಎಂಬಲ್ಲಿ ವಕೀಲರಿಗೆ ಹಲ್ಲೆಗೈದು ಪತ್ನಿಯ ಮಾನಭಂಗಕ್ಕೆ ಯತ್ನಿಸಿರುವ ಆರೋಪ ವ್ಯಕ್ತವಾಗಿದ್ದು,
ಹಲ್ಲೆಗೈದ ಆರೋಪಿಗೆ ಸಾರ್ವಜನಿಕರು ಥಳಿಸಿದ್ದಾರೆ.

ದಾರಿ ಅವ್ಯವಸ್ಥೆಯ ಬಗ್ಗೆ ವಕೀಲ ಜಯಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಕ್ಕೆ ಕೆರಳಿದ್ದ ಜಾಗದ ಮಾಲೀಕ ವೆಲೇರಿಯನ್ ಮೆಂಡೋನ್ಸಾ ಎಂಬಾತ ಜಯಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದೆ.

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ತಡೆಯಲು ಮುಂದಾದ ಪತ್ನಿ ಮೈಮೇಲೆ ಕೈಹಾಕಿ ಮಾನಭಂಗಕ್ಕೆ ಯತ್ನಿಸಿದ ಆರೋಪವೂ ಕೇಳಿ ಬಂದಿದೆ.

ಘಟನೆ ಕುರಿತು ಆರೋಪಿ ರಾಬರ್ಟ್ ವಲೇರಿಯನ್ ಮೆಂಡೋನ್ಸಾ ಜಾಗದ ಬಳಿ ಬಂದಿದ್ದ ತನಗೆ ಜಯಪ್ರಕಾಶ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆಂದು ಪ್ರತಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!