Wednesday, June 3, 2026
Homeತಾಜಾ ಸುದ್ದಿರಾಜ್ಯದ ಜನತೆಗೆ ಮತ್ತೊಂದು ಬರೆ; ಪ್ರತಿ ಲೀಟರ್‌ ಹಾಲಿನ ದರ 2.10 ರೂ ಹೆಚ್ಚಳ

ರಾಜ್ಯದ ಜನತೆಗೆ ಮತ್ತೊಂದು ಬರೆ; ಪ್ರತಿ ಲೀಟರ್‌ ಹಾಲಿನ ದರ 2.10 ರೂ ಹೆಚ್ಚಳ

- Advertisement -
- Advertisement -

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬರೆ ಬಿದ್ದಿದೆ. ಪ್ರತಿ ಲೀಟರ್‌ ಹಾಲಿನ ದರವನ್ನು 2.10 ರೂಗೆ ಹೆಚ್ಚಿಸಿ ಕೆಎಂಎಫ್‌ ಆದೇಶ ಹೊರಡಿಸಿದೆ.

ಗ್ರಾಹಕರಿಗೆ ಸಾವಿರ ಎಂಎಲ್ ಇದ್ದ ಹಾಲು 2.10 ಪೈಸೆ ದರ ಹೆಚ್ಚಳವಾಗಿದೆ.ಈ ಬಗ್ಗೆ ಕರ್ನಾಟಕ ಹಾಲು ಮಂಡಳಿ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ.ಪ್ರತಿ ದಿನ ೯೮ ಲಕ್ಷ ೧೭ಸಾವಿರ ಲೀ ಸಂಗ್ರಹ ಆಗ್ತಿದೆ.ಸದ್ಯದಲ್ಲಿ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ ಎಂದರು.

ಇದು ದಾಖಲೆ. ರಾಜ್ಯದ ೨೭ ಲಕ್ಷಹಾಲು ಉತ್ಪಾದಕರು ಇದಕ್ಕೆ ಕಾರಣ.ಸದ್ಯದ ಶೇಖರಣೆಯಲ್ಲಿ ೩೦ ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ.ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ.೨೭ ಲಕ್ಷ ಹಾಲು ಉತ್ಪಾದಕ ರು ಹಾಗೂ ಗ್ರಾಹಕರಿಗೆ ತೊಂದರೆಯಾಗಬಾರದು.ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೇ . ಪ್ರತೀ ಹಾಲಿನ ಪ್ಯಾಕೆಟ್ ನಲ್ಲು 50ml ಜಾಸ್ತಿ ಹಾಲು ಇರಲಿದೆ ಎಂದು ಅವರ ತಿಳಿಸಿದ್ದಾರೆ.

ಹಾಲಿನ‌ ಹೊಸ ದರ ಈ ರೀತಿಯಿದೆ.

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ

ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ

ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ

ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ

ಶುಭಂ ಹಾಲು 48ರಿಂದ 50 ರೂ

ಸಮೃದ್ದಿ ಹಾಲು 51ರಿಂದ 53ರೂ

ಶುಭಂ (ಟೋನ್ಡ್ ಹಾಲು) 49ರಿಂದ 51ರೂ

ಸಂತೃಪ್ತಿ ಹಾಲು 55 ರಿಂದ 57 ರೂ

ಶುಭಂ ಗೋಲ್ಡ್ ಹಾಲು 49ರಿಂದ 51ರೂ

ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

- Advertisement -

Latest News

error: Content is protected !!