Thursday, June 4, 2026
Homeತಾಜಾ ಸುದ್ದಿನಟ ದರ್ಶನ್ ರನ್ನು ತುಮಕೂಕು ಜೈಲಿಗೆ ಶಿಫ್ಟ್ ಮಾಡೋದಕ್ಕೆ ಕೋರ್ಟ್ ಸಮ್ಮತಿ

ನಟ ದರ್ಶನ್ ರನ್ನು ತುಮಕೂಕು ಜೈಲಿಗೆ ಶಿಫ್ಟ್ ಮಾಡೋದಕ್ಕೆ ಕೋರ್ಟ್ ಸಮ್ಮತಿ

- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ತುಮಕೂರು ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ನೀಡಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಎ2 ಆರೋಪಿ ನಟ ದರ್ಶನ್ ಸೇರಿದಂತೆ ಎ8 ರವಿ, ಎ15 ಕಾರ್ತಿಕ್, ಎ16 ಕೇಶವ ಮೂರ್ತಿ, ಎ17 ನಿಖಿಲ್ ನಾಯಕ್ ಅವರನ್ನು ಸ್ಥಳಾಂತರ ಕೋರಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಜೈಲು ಅಧಿಕಾರಿಗಳು ಮನವಿ ಮಾಡಿದ್ದರು,

ಇದೀಗ ಜೈಲಾಧಿಕಾರಿಗಳ ಮನವಿಗೆ ಸಮ್ಮತಿಸಿದ ಕೋರ್ಟ್  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ ಎ.2 ಆರೋಪಿ ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲಿದ್ದಾರೆ.

ಅಂದಹಾಗೆ ರೇಣುಕಾಸ್ವಾಮಿ ಕೊಲೆಯ ಬಳಿಕ ಆರೋಪಿಗಳಾದಂತ ಕಾರ್ತಿಕ್, ಕೇಶವ್ ಹಾಗೂ ನಿಖಿಲ್ ಪೊಲೀಸರ ಮುಂದೆ ಖುದ್ದು ಶರಣಾಗಿದ್ದರು. ಈ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿತ್ತು. ಈಗ ಇವರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.

- Advertisement -

Latest News

error: Content is protected !!