Thursday, June 4, 2026
Homeಕರಾವಳಿತಡರಾತ್ರಿ ಭೀಕರ ಕಾರು ಅಪಘಾತ

ತಡರಾತ್ರಿ ಭೀಕರ ಕಾರು ಅಪಘಾತ

- Advertisement -
- Advertisement -

ಅರಂತೋಡು: ಇಲ್ಲಿನ ಸಂಪಾಜೆಯ ಬಳಿ ಕಳೆದ ತಡರಾತ್ರಿ ಭೀಕರ ಕಾರು ಅಪಘಾತ ಸಂಭವಿಸಿ, ಕಾರು ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಕಳೆದ ತಡರಾತ್ರಿ ನಡೆದಿದೆ ಎಂದು ಮಾಹಿತಿ ಲಭಿಸಿದೆ.

ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರಕ್ಕೆ ಹೋಗಿ ತಮ್ಮ ಕೆಲಸ ಮುಗಿಸಿ ವಾಪಸ್‌ ಮಂಡ್ಯಕ್ಕೆ ಹೊರಟಿದ್ದರು. ಈ ವೇಳೆ ರಾತ್ರಿ 3 ಗಂಟೆಯ ವೇಳೆಗೆ ಸಂಪಾಜೆ ಗೇಟಿನಿಂದ ಸ್ವಲ್ಪ ದೂರದಲ್ಲಿ ನಿಯಂತ್ರಣ ತಪ್ಪಿದ ವೋಕ್ಸ್‌ವ್ಯಾಗನ್ ಕಾರು ರಸ್ತೆಯ ರಕ್ಷಣಾ ಗೋಡೆಗೆ ಢಿಕ್ಕಿಯಾಗಿದೆ.

ಢಿಕ್ಕಿ ಹೊಡೆದ ರಭಸಕ್ಕೆ ಕಾರು ಛಿದ್ರವಾಗಿದೆ. ರಸ್ತೆಯ ಬದಿಯ ಕಬ್ಬಿಣದ ತಡೆಗೋಡೆ ಕಾರಿನೊಳಕ್ಕೆ ನುಗ್ಗಿದೆ. ಅಪಘಾತದ ತೀವ್ರತೆಗೆ ಓರ್ವನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಮತ್ತೊಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!