Sunday, June 7, 2026
Homeತಾಜಾ ಸುದ್ದಿBREAKING: ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

BREAKING: ಹಿರಿಯ ನಟಿ ಜಯಂತಿ ಆಸ್ಪತ್ರೆಗೆ ದಾಖಲು

- Advertisement -
- Advertisement -

ಬೆಂಗಳೂರು: ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ತಮಾದಿಂದ ಬಳಲುತ್ತಿರುವ ಅವರಿಗೆ ನಿನ್ನೆ ಉಸಿರಾಟದತೊಂದರೆ ಎದುರಾಗಿತ್ತು. ತಕ್ಷಣ ಅವರ ಪುತ್ರ ಕೃಷ್ಣ ಕುಮಾರ್, ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ವಿಕ್ರಮ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಕೆ ಎಸ್ ಸತೀಶ್ ಮತ್ತು ತಂಡ ನಟಿ ಜಯಂತಿ ಅವರನ್ನು ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರುಎಚ್ಚರದಿಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಮಾಹಿತಿ ನೀಡಿದ್ದಾರೆ. 

ನಿನ್ನೆ ಜಯಂತಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಯೇ ಕೋವಿಡ್-19 ಸ್ವ್ಯಾಬ್ ಸ್ಯಾಂಪ್ ಪಡೆಯಲಾಗಿತ್ತು. ಅವರ ವಯಸ್ಸು 70 ದಾಟಿರುವ ಕಾರಣ, ಅವರ ಕುಟುಂಬದವರೆಲ್ಲರೂ ಆತಂಕದಲ್ಲಿದ್ದರು. ಆದರೆ ಇವತ್ತು ರಿಪೋರ್ಟ್ ನೆಗಟಿವ್ ಎಂದು ಬಂದಿದೆ. 

- Advertisement -

Latest News

error: Content is protected !!