Tuesday, June 9, 2026
Homeಕರಾವಳಿಸುಳ್ಯ: ಅಡುಗೆ ಮಾಡುತ್ತಿದ್ದಾಗ ಬಿಸಿ ನೀರಿನ ಪಾತ್ರೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವತಿ ಸಾವು

ಸುಳ್ಯ: ಅಡುಗೆ ಮಾಡುತ್ತಿದ್ದಾಗ ಬಿಸಿ ನೀರಿನ ಪಾತ್ರೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವತಿ ಸಾವು

- Advertisement -
- Advertisement -

ಸುಳ್ಯ: ಅಡುಗೆ ಮಾಡುತ್ತಿದ್ದಾಗ ಬಿಸಿ ನೀರಿನ ಪಾತ್ರೆ ಬಿದ್ದು ಗಂಭೀರ ಗಾಯಗೊಂಡಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುದ್ಕುಳಿ ಎಂಬಲ್ಲಿ ನಡೆದಿದೆ. ದಿ.ಸುಬ್ರಾಯ ರವರ ಪುತ್ರಿರೇಖಾ (35)ಮೃತ ಯುವತಿ.

ರೇಖಾ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಗ ಬಿಸಿ ನೀರಿನ ಪಾತ್ರೆ ಆಕಸ್ಮಿಕವಾಗಿ ಮೈಮೇಲೆ  ಬಿದ್ದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದರು. ಆಕೆಯನ್ನು ಸ್ಥಳೀಯರ ನೆರವಿನಿಂದ ಸುಳ್ಯದ ಸರಕಾರಿ ಆಸ್ಪತ್ರೆಗೆ ಯುವತಿಯನ್ನು ಕರೆ ತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ದಿನ ಕಳೆದಂತೆ ಬಿಸಿ ನೀರು ಬಿದ್ದು ಗುಳ್ಳೆ ಬಂದ ಭಾಗಗಳಲ್ಲಿ ಒಡೆದು ರಕ್ತಸೋರಲಾರಂಭಿಸಿದ್ದರಿಂದಾಗಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!