Thursday, June 4, 2026
Homeತಾಜಾ ಸುದ್ದಿದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಪ್ರಕರಣ; ಇಂದು ಬರಲಿದೆಯೇ ತೀರ್ಪು?

ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಪ್ರಕರಣ; ಇಂದು ಬರಲಿದೆಯೇ ತೀರ್ಪು?

- Advertisement -
- Advertisement -

ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿದ್ದ ಕಾರಣ, ವಿಜಯ್ ಅವರು 2018ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಜಯ್ ರೆಡಿ ಇದ್ದಾರೆ. ಇಷ್ಟೇ ಅಲ್ಲ ಪತ್ನಿಗೆ ಜೀವನಾಂಶ ಕೂಡ ಕೊಡಲು ರೆಡಿ ಇದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸ್ಯಾಂಡಲ್​​ವುಡ್​ನಲ್ಲಿ ವಿಚ್ಛೇದನಗಳ ಮೇಲೆ ವಿಚ್ಛೇದನ ನಡೆಯುತ್ತಿದ್ದು, ಮೊದಲು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆಯೋ ಘೋಷಣೆ ಮಾಡಿದರು. ಆ ಬಳಿಕ ಯುವ ಹಾಗೂ ಶ್ರೀದೇವಿ ವಿಚ್ಛೇದನ ವಿಚಾರ ಚರ್ಚೆ ಆಯಿತು. ಈಗ  ದುನಿಯಾ ವಿಜಯ್ಹಾಗೂ ನಾಗರತ್ನ ವಿಚ್ಛೇದನ ವಿಚಾರ ಚರ್ಚೆಗೆ ಬಂದಿದೆ. ಜೂನ್ 13ರಂದು ಈ ಪ್ರಕರಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ವಾದ-ವಿವಾದವನ್ನು ಆಲಿಸಲಾಗಿದೆ. 3 ಘಂಟೆ ನಂತರ ಅರ್ಜಿ ವಿಚಾರಣೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಹೀಗಾಗಿ ಅವರ ಪರ ವಕೀಲರು ಮಾತ್ರ ಕೋರ್ಟ್​ಗೆ ಹಾಜರಾಗುತ್ತಿದ್ದಾರೆ.

- Advertisement -

Latest News

error: Content is protected !!