Friday, June 5, 2026
Homeಕರಾವಳಿವಿಟ್ಲ;ಸ್ಕೂಟಿಯಲ್ಲಿ ಹೋಗುತ್ತಿದ್ದ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ವಿಟ್ಲ;ಸ್ಕೂಟಿಯಲ್ಲಿ ಹೋಗುತ್ತಿದ್ದ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

- Advertisement -
- Advertisement -

ವಿಟ್ಲ;ಸ್ಕೂಟಿಯಲ್ಲಿ ಹೋಗುತ್ತಿದ್ದ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರ ತಂಡವೊಂದು  ಹಲ್ಲೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ  ಕನ್ಯಾನ ಸಮೀಪದ ಒಡಿಯೂರು ಐಟಿಐ ಕಾಲೇಜು ಬಳಿ ನಡೆದಿದೆ. ಪ್ರಕಾಶ್‌ ಹಲ್ಲೆಗೊಳಗಾದ ಯುವಕ.

 ಪ್ರಕಾಶ್ ತಮ್ಮ ಸ್ಕೂಟಿಯಲ್ಲಿ ಬರುತ್ತಿದ್ದ ವೇಳೆ ಕೇರಳ ನೋಂದಣಿಯ ಕಾರಿನಲ್ಲಿ ಬಂದ ನಾಲ್ವರು  ಅನ್ಯಕೋಮಿನ ಯುವಕರು ಗುರಾಯಿಸಿಕೊಂಡು ವಾಹನವನ್ನು ಹಿಂದಕ್ಕೆ ಮುಂದಾಕ್ಕೆ ಓವ‌ರ್ ಟೇಕ್ ರೀತಿಯಲ್ಲಿ ಚಲಾಯಿಸಿದ್ದಾರೆ.ಬಳಿಕ ರಸ್ತೆಯಲ್ಲಿಯೇ ಅಡ್ಡ ಇಟ್ಟು ಪ್ರಕಾಶ್ ರವರ ಮೇಲೆ ಹಲ್ಲೆ ನಡೆಸಿದ್ದು, ಜಾತಿ ನಿಂದನೆಗೈದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಘಟನೆಯಿಂದಾಗಿ ಗಾಯಗೊಂಡ ಪ್ರಕಾಶ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!