Friday, June 5, 2026
Homeಕರಾವಳಿಮಂಗಳೂರುಲೋಕಸಭಾ ಚುನಾವಣೆಯಲ್ಲಿ ಶೇ. 100 ರಷ್ಟು ಮತದಾನವಾದ ಬಾಂಜಾರು ಮಲೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

ಲೋಕಸಭಾ ಚುನಾವಣೆಯಲ್ಲಿ ಶೇ. 100 ರಷ್ಟು ಮತದಾನವಾದ ಬಾಂಜಾರು ಮಲೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

- Advertisement -
- Advertisement -

ಬೆಳ್ತಂಗಡಿ: ಲೋಕಸಭಾ ಚುನಾವಣೆಯಲ್ಲಿ ಶೇಕಡಾ ನೂರರಷ್ಟು ಮತದಾನದ ಸಾಧನೆ ಮಾಡಿದ ಬಾಂಜಾರು ಮಲೆಗೆ ಮಾಜಿ ಸಚಿವ ಮತ್ತು ಶಾಸಕ ಎಸ್. ಸುರೇಶ್ ಕುಮಾರ್ ಇಂದು ಭೇಟಿ ನೀಡಿದರು.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಾಂಜಾರು ಮಲೆ ಮತಗಟ್ಟೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮತದಾನ ನಡೆದಿತ್ತು.

ಇಂದು ಬಾಂಜಾರು ಸಮುದಾಯ ಭವನದಲ್ಲಿ ಗ್ರಾಮಸ್ಥರ‌ನ್ನು ಭೇಟಿ ಮಾಡಿ ಶಾಲು ಹೊದಿಸಿ ಗೌರವಿಸಿದ ಸುರೇಶ್ ಕುಮಾರ್, ಕೆಲವು ಹೊತ್ತು ಅವರೊಂದಿಗೆ ಮಾತುಕತೆ ನಡೆಸಿದರು.

ಮತಗಟ್ಟೆಯಲ್ಲಿದ್ದ 111 ಮತಗಳಲ್ಲಿ 111 ಮತಗಳು ಕೂಡಾ ಚಲಾವಣೆಯಾಗಿದ್ದು, ಗ್ರಾಮದಿಂದ ಹೊರಗಿದ್ದ ಮತದಾರರು ಕೂಡಾ ಬಂದು ಮತದಾನ ಮಾಡಿದ್ದು ಗಮನ ನೆಳೆದಿತ್ತು.

ಬಾಂಜಾರು ಮಲೆ ಮತಗಟ್ಟೆಯಲ್ಲಿನ ನೂರರಷ್ಟು ಮತದಾನದ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾ‌ನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ‌ಹಂಚಿಕೊಂಡಿದ್ದರು

- Advertisement -

Latest News

error: Content is protected !!