Monday, June 15, 2026
Homeಕರಾವಳಿಬೆಳ್ತಂಗಡಿ : ಇಂದಬೆಟ್ಟು ಅಕ್ರಮ ಮರಳುಗಾರಿಕೆ ವಿಚಾರ; ಕಡುರುದ್ಯಾವರ ಬಿಜೆಪಿ ಮಾಜಿ ಅಧ್ಯಕ್ಷ ಮೇಲೆ ಹಿಗ್ಗಾಮುಗ್ಗಾ...

ಬೆಳ್ತಂಗಡಿ : ಇಂದಬೆಟ್ಟು ಅಕ್ರಮ ಮರಳುಗಾರಿಕೆ ವಿಚಾರ; ಕಡುರುದ್ಯಾವರ ಬಿಜೆಪಿ ಮಾಜಿ ಅಧ್ಯಕ್ಷ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

- Advertisement -
- Advertisement -

ಬೆಳ್ತಂಗಡಿ : ಇಂದಬೆಟ್ಟಿನಲ್ಲಿ ಕಾರ್ಯಚರಿಸುತ್ತಿದ್ದ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ನಡೆದ ಕಿರಿಕ್ ಹಿಗ್ಗಾಮುಗ್ಗಾ ಥಳಿಸುವವರೆಗೆ ಮುಂದುವರಿದ ಅಮಾನವೀಯ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಅಶೋಕ್ ಪೂಜಾರಿ ಮೇಲೆ ಅಕ್ರಮ ಮರಳುಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿದ ವಿಚಾರದಲ್ಲಿ  ಜೂ.6 ರಂದು ರಾತ್ರಿ ಬಿಜೆಪಿ ಕಾರ್ಯಕರ್ತರು ಮತ್ತು ಮಹೇಶ್ ಶೆಟ್ಟಿ ತಂಡದ ಸದಸ್ಯರು ಸೇರಿಕೊಂಡು ಸೋಮದಡ್ಕ ಪ್ರಗತಿ ವೈನ್ ಶಾಪ್ ಬಳಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಅಶೋಕ್ ಪೂಜಾರಿ ಹಾಕಿಕೊಂಡಿದ್ದ ಅಂಗಿಯನ್ನು ಹರಿದು ಹಾಕಿ ಚಿನ್ನವನ್ನು ಎಳೆದುಹಾಕಿ ಹಲ್ಲೆ ನಡೆಸಿದ್ದಾರೆ.ಕೊನೆಗೆ ಚಿನ್ನವನ್ನು ವಾಪಸ್ ನೀಡಿದ್ದಾರೆ. ‌ಈ ಬಗ್ಗೆ ವಿಡಿಯೋ ಮತ್ತು ಆಡಿಯೋ ವೈರಲ್ ಆಗಿದ್ದು,‌ಪ್ರಕರಣದ ಬಗ್ಗೆ ಈವರೆಗೆ ಹಲ್ಲೆಗೊಳಾಗಾದ ಅಶೋಕ್ ಪೂಜಾರಿ ದೂರು ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

- Advertisement -

Latest News

error: Content is protected !!