Thursday, June 4, 2026
Homeಕರಾವಳಿಉಡುಪಿಮಣಿಪಾಲದಲ್ಲಿ ಗಾಂಜಾ ಮಾರುತ್ತಿದ್ದ ವಿದ್ಯಾರ್ಥಿ ಪೊಲೀಸರಿಂದ ಅರೆಸ್ಟ್

ಮಣಿಪಾಲದಲ್ಲಿ ಗಾಂಜಾ ಮಾರುತ್ತಿದ್ದ ವಿದ್ಯಾರ್ಥಿ ಪೊಲೀಸರಿಂದ ಅರೆಸ್ಟ್

- Advertisement -
- Advertisement -

ಉಡುಪಿ: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಮಣಿಪಾಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇರಳ ಮೂಲದ ವಿದ್ಯಾರ್ಥಿ ಸಿದ್ದಾರ್ಥ ಬಂಧಿತ ಆರೋಪಿಯಾಗಿದ್ದು, ಮಣಿಪಾಲದ ಹೆರ್ಗದ ಅಪಾರ್ಟ್ ಮೆಂಟ್ ಒಂದರಲ್ಲಿ ವಶಕ್ಕೆ ಪಡೆಯಲಾಗಿದೆ.

ಮಣಿಪಾಲದಲ್ಲಿ ವಿದ್ಯಾರ್ಥಿಯಾಗಿದ್ದ ಸಿದ್ಧಾರ್ಥ ಇತರ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದ್ದು, ಬಂಧಿತನಿಂದ
20 ಸಾವಿರ ರೂಪಾಯಿ ಮೌಲ್ಯದ 388 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನಿಂದ ಗಾಂಜಾ ಖರೀದಿಸಿ ಮಣಿಪಾಲದಲ್ಲಿ ಮಾರಾಟ ಮಾಡುತ್ತಿದ್ದು, ಸಿಗರೇಟ್ ಮಾದರಿಯ 43 ರೋಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Latest News

error: Content is protected !!