Friday, June 5, 2026
Homeಕರಾವಳಿನೆಲ್ಯಾಡಿ: ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ನೂತನ ಫ್ಲೈಒವರ್‌ನಲ್ಲಿ ಕಾರು-ಬೈಕ್‌ಗಳ ನಡುವೆ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಸಾವು

ನೆಲ್ಯಾಡಿ: ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ನೂತನ ಫ್ಲೈಒವರ್‌ನಲ್ಲಿ ಕಾರು-ಬೈಕ್‌ಗಳ ನಡುವೆ ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಉದನೆ: ರಾಷ್ಟ್ರೀಯ ಹೆದ್ದಾರಿ ೭೫ ರ ನೆಲ್ಯಾಡಿ ಸಮೀಪದ ಉದನೆಯ ನೆಲ್ಯಡ್ಕ ಎಂಬಲ್ಲಿ ಕಾರು ಮತ್ತು ಬೈಕ್‌ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನಳಾಲು ನಿವಾಸಿ ರವಿ ಎಂದು ಗುರುತಿಸಲಾಗಿದೆ. ಮೃತ ರವಿ ಪಿಕಪ್‌ ಮಾಲೀಕರಾಗಿದ್ದು, ಸ್ಥಳೀಯವಾಗಿ ಹೆಚ್ಚು ಚಿರಪರಿಚಿತರಾಗಿದ್ದರು.

ನೇಲ್ಯಡ್ಕ ಶಾಲೆಯ ಎದುರು ನೂತನವಾಗಿ ನಿರ್ಮಾಣವಾಗಿರುವ ಪ್ಲೈಓವರ್‌ನಲ್ಲಿ ನಡೆದ ಬೈಕ್‌ ಮತ್ತು ಕಾರು ಅಪಘಾತದ ತೀವ್ರತೆ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ನಿಲ್ಲುತ್ತಿಲ್ಲ ಅಪಘಾತ
ರಾಷ್ಟ್ರೀಯ ಹೆದ್ದಾರಿ ೭೫ ರ ಚತುಷ್ಪಥದ ಕಾಮಗಾರಿ ಪ್ರಾರಂಭವಾದಗಿನಿಂದ ಅಪಘಾತದ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದು ಅಪಘಾತ ನಡೆದ ಫೈಓವರ್‌ನ ಒಂದು ಭಾಗವನ್ನು ಮಾತ್ರ ವಾಹನ ಸಂಚಾರಕ್ಕೆ ತೆರೆದಿದ್ದು, ಆದರೆ ಸಮರ್ಪಕವಾದ ಸೂಚನಾ ಫಲಕಗಳು ಇಲ್ಲದೇ ಇರುವುದು ಮತ್ತು ಫೈಓವರ್‌ನ ಮಧ್ಯದಲ್ಲಿ ಇನ್ನೂ ಕಾಮಗಾರಿಗಳು ಬಾಕಿ ಇರುವುದರಿಂದ ಬೈಕ್‌ ಸವಾರರಿಗೆ ಸಂಚರಿಸಲು ಕಷ್ಟವಾಗುತ್ತಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಮಹಾರಾಷ್ಟ್ರ ಮೂಲದ ಎಸ್‌.ಎನ್‌. ಅಠವಾಡೆ ಎಂಬ ಕಂಪೆನಿ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಪಡೆದಿದ್ದು, ಕೆಲದಿನಗಳ ಹಿಂದಷ್ಟೇ ಕಳಪೆ ಕಾಮಗಾರಿಯಿಂದಾಗಿ ಎಂಜಿರ ಸಮೀಪದ ಪರಕ್ಕಳದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಮುರಿದು ಬಿದ್ದಿತ್ತು.

- Advertisement -

Latest News

error: Content is protected !!