Thursday, June 4, 2026
Homeಕರಾವಳಿಮಂಗಳೂರುಸುಳ್ಯ; ಮನೆಯಲ್ಲಿ ವಿಷಕಾರಿ ಹಾವು ಕಚ್ಚಿ ಮಹಿಳೆ ಸಾವು

ಸುಳ್ಯ; ಮನೆಯಲ್ಲಿ ವಿಷಕಾರಿ ಹಾವು ಕಚ್ಚಿ ಮಹಿಳೆ ಸಾವು

- Advertisement -
- Advertisement -

ಸುಳ್ಯ; ಮನೆಯಲ್ಲಿ ವಿಷಕಾರಿ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಹರಿಹರದಲ್ಲಿ ಇಂದು ಬೆಳಗ್ಗೆ ನಡೆದಿದೆ. ದೇವಮ್ಮ (60) ಸಾವನ್ನಪ್ಪಿದ ಮಹಿಳೆ.

ದೇವರು ಅವರು ಭಾನುವಾರ ಬೆಳಗ್ಗೆ 9.45 ರ ವೇಳೆಗೆ ಮನೆಯಲ್ಲಿದ್ದ ವೇಳೆ ಹಾವು ಕಚ್ಚಿದೆ. ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಮನೆಯವರಿಗೆ ವಿಷಯ ಗೊತ್ತಾಗಲಿಲ್ಲ. ಮನೆಯವರಿಗೆ ವಿಷಯ ಗೊತ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಳ್ಯದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.  ಮನೆಯವರಿಗೆ ಮೊದಲೇ ವಿಚಾರ ಗೊತ್ತಾಗುತ್ತಿದ್ದರೆ ಅವರನ್ನು ಉಳಿಸಬಹುದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -

Latest News

error: Content is protected !!