Friday, June 5, 2026
Homeಇತರಕೂಲ್ ಕ್ಯಾಪ್ಟನ್ ಗೆ ಬರ್ತಡೇ ಸಂಭ್ರಮ.. ಹಾಡಿನ ಮೂಲಕ ಸ್ಪೆಷಲ್ ವಿಶಸ್ ತಿಳಿಸಿದ ಡ್ವೇನ್ ಬ್ರಾವೋ..

ಕೂಲ್ ಕ್ಯಾಪ್ಟನ್ ಗೆ ಬರ್ತಡೇ ಸಂಭ್ರಮ.. ಹಾಡಿನ ಮೂಲಕ ಸ್ಪೆಷಲ್ ವಿಶಸ್ ತಿಳಿಸಿದ ಡ್ವೇನ್ ಬ್ರಾವೋ..

- Advertisement -
- Advertisement -

ಹೊಸದೆಹಲಿ : ಭಾತರದ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕೂಡ ಒಬ್ಬರು. ಧೋನಿ ಅವರಿಗೆ ಇವತ್ತು 39ನೇ ಹುಟ್ಟು ಹಬ್ಬದ ಸಂದರ್ಭ. ವಿಶ್ವದೆಲ್ಲೆಡೆಯಿಂದ ಈ ಆಟಗಾರನಿಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ.

ಕೊರೊನಾದ ಆರ್ಭಟದ ಮಧ್ಯೆಯೇ ಧೋನಿ ಅಭಿಮಾನಿಗಳು ತಮಗಾದ ರೀತಿಯಲ್ಲಿ ಅವರ ನೆಚ್ಚಿನ ಆಟಗಾರನ ಬರ್ತಡೇ ಆಚರಿಸುತ್ತಿದ್ದಾರೆ. ಬೇರೆ ಬೇರೆ ಆಟಗಾರರು ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಆದ್ರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡಿಜೆ ಬ್ರಾವೋ ಮಾತ್ರ ಧೋನಿ ಅವರಿಗೆ ಮರೆಯಲಾರದ ಗಿಫ್ಟ್ ಒಂದನ್ನು ನೀಡಿದ್ದಾರೆ.

ಮಾಹಿ ಹುಟ್ಟುಹಬ್ಬಕ್ಕೆ ವೆಸ್ಟ್​ ಇಂಡೀಸ್​ ಆಲ್​ರೌಂಡರ್​​ ಡ್ವೇನ್ ಬ್ರಾವೊ ವಿಶೇಷವಾಗಿ ಶುಭಾಶಯ ಕೋರಲು ‘ನಂಬರ್​ 7’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಅವರೇ ಹಾಡಿದ್ದು, ಸದ್ಯ  ಡಿಜೆ ಬ್ರಾವೊ ಅವರ ಯ್ಯೂಟೂಬ್​ ಖಾತೆಯಲ್ಲಿ ಹಾಡು ಬಿಡುಗಡೆಗೊಂಡಿದೆ.

ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೆ, ಸಂಗೀತ ಲೋಕದಲ್ಲೂ ಪ್ರಸಿದ್ಧಿ ಪಡೆದಿರುವ ಬ್ರಾವೊ ಅವರು ಮಾಹಿ ಹುಟ್ಟುಹಬ್ಬಕ್ಕೆ ‘ನಂಬರ್ 7‘ ಎಂಬ ಹಾಡನ್ನು ಸಿದ್ಧಪಡಿಸಿ ಬೆಸ್ಟ್​ ಗಿಫ್ಟ್​ ನೀಡಿದ್ದಾರೆ. ಹಾಡಿನಲ್ಲಿ ಧೋನಿಯನ್ನು ಕೊಂಡಾದಿದ್ದಾರೆ. ಅಷ್ಟೆ ಅಲ್ಲದೆ, ಮಾಹಿ ಸಾಧನೆಯನ್ನು ಹಾಡಿ ಹೊಗಲಿದ್ದಾರೆ ಜೊತೆಗೆ ಫಾರ್​ ಮೈ ಬ್ರದರ್​ ಎನದರ್​ ಮದರ್​ ಎಂದು ಹೇಳಿದ್ದಾರೆ. ಇಷ್ಟರಲ್ಲೇ ಧೋನಿ ಮತ್ತು ಬ್ರಾವೊ ಅವರ ಸಂಬಂಧ ಹೇಗಿದೆ ಎಂಬುವುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇನ್ನು ಬ್ರಾವೊಗೆ ಧೋನಿ ಮೇಲೆ ಕೊಂಚ ಪ್ರೀತಿ ಜಾಸ್ತಿಯೇ. ಐಪಿಎಲ್​ನಲ್ಲಿ ಇವರಿಬ್ಬರು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. ಹಾಗಾಗಿ ಇಬ್ಬರಿಬ್ಬರ ಸಂಬಂಧ  ಅಣ್ಣ-ತಮ್ಮದಿರಂತಿದೆ. ಬ್ರಾವೊ ತನ್ನ ಬ್ರದರ್​​ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ವಿಶ್​ ಮಾಡಿದ್ದಾರೆ. ಮೊದಲ ಬಾರಿಗೆ ವಿದೇಶ ಕ್ರಿಕೆಟ್​ ತಾರೆಯೊಬ್ಬರು ಭಾರತೀಯ ಕ್ರಿಕೆಟ್ ಆಟಗಾರನ ಹುಟ್ಟುಹಬ್ಬಕ್ಕೆ ಹಾಡಿನ ಮೂಲಕ ಶುಭಾಶಯ ಕೋರಿದ್ದಾರೆ.

- Advertisement -

Latest News

error: Content is protected !!