Sunday, June 7, 2026
Homeಕರಾವಳಿಉಡುಪಿಉಡುಪಿ; ಕಲ್ಯಾಣಪುರ ಸೇತುವೆಗೆ ಖಾಸಗಿ ಬಸ್ ಡಿಕ್ಕಿ

ಉಡುಪಿ; ಕಲ್ಯಾಣಪುರ ಸೇತುವೆಗೆ ಖಾಸಗಿ ಬಸ್ ಡಿಕ್ಕಿ

- Advertisement -
- Advertisement -

ಉಡುಪಿ; ಕಲ್ಯಾಣಪುರ ಸೇತುವೆಗೆ ಖಾಸಗಿ ಬಸ್ ಡಿಕ್ಕಿಯಾಗಿದ್ದು ಭಾರೀ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಉಡುಪಿಯಿಂದ ಬ್ರಹ್ಮಾವರದ ಸಾಗುವ ಬಸ್  ಸ್ವರ್ಣ ನದಿಯ ಕಲ್ಯಾಣಪುರ ಸೇತುವೆಗೆ ಡಿಕ್ಕಿ ಹೊಡೆದಿದೆ.

ಬಸ್ ಸೇತುವೆಯ ಗರ್ಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಡರ್ ಗೆ ಹಾನಿಯಾಗಿದ್ದು,. ಇನ್ನು ಸ್ವಲ್ಪ ಮುಂದೆ ಬಸ್ ಚಲಿಸಿದ್ದರೆ ಬಸ್ಸು ಪ್ರಯಾಣಿಕರು ನದಿಗೆ ಬೀಳುತ್ತಿದ್ದರು. ಇನ್ನು ಈ ವೇಳೆ ಸೇತುವೆ ಕೆಳಗಡೆ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಶಂಕರ ಎಂಬವರ ಮೇಲೆ ಸಿಮೆಂಟ್ ಕಂಬದ ತುಂಡೊಂದು ಮುರಿದು ಬಿದ್ದು ಕೈಗೆ ಏಟಾಗಿದೆ. 

ಇನ್ನು ಸೇತುವೆಯ ಕೆಳಗೆ ಅಲ್ಲಲ್ಲಿ ಕಾಂಕ್ರೀಟ್ ಬಿರುಕು ಬಿಟ್ಟಿದೆ ಸೇತುವೆಯನ್ನು ಅಡಿಬಾಗದಲ್ಲು ದುರುಸ್ಥಿ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!