Wednesday, June 3, 2026
Homeಕರಾವಳಿಉಡುಪಿಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಆಸ್ಪತ್ರೆಯಲ್ಲಿ ಸಾವು

ಉಡುಪಿ: ತಾಯಿಯ ಶವದೊಂದಿಗೆ 3 ದಿನ ಕಳೆದಿದ್ದ ಮಾನಸಿಕ ಅಸ್ವಸ್ಥೆ ಪುತ್ರಿ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಉಡುಪಿ: ತಾಯಿಯ ಶವದೊಂದಿಗೆ ಮಾನಸಿಕ ಅಸ್ವಸ್ಥಳಾಗಿದ್ದ ಪುತ್ರಿ 3 ದಿನ ಕಳೆದಿರುವ ಮನ ಕಲಕುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.ತಾಯಿ ಮೃತಪಟ್ಟಿದ್ದ ಕಾರಣ ಅಹಾರ ಮತ್ತು ನೀರಿಲ್ಲದೇ ಮಗಳು ಕೂಡಾ ಅಸ್ವಸ್ಥಳಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ದಾಸನಹಾಡಿಯ ನಿವಾಸಿಗಳಾಗಿದ್ದ ತಾಯಿ ಜಯಂತಿ ಶೆಟ್ಟಿ (62) ಮತ್ತು ಮಗಳು ಪ್ರಗತಿ ಶೆಟ್ಟಿ (32) ಮೃತಪಟ್ಟವರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜಯಂತಿ ಶೆಟ್ಟಿ
ಮೂರ್ನಾಲ್ಕು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕುಂದಾಪುರ ಠಾಣೆ ಪೊಲೀಸರು ಪುತ್ರಿಯನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುತ್ರಿ ಪ್ರಗತಿ ಶೆಟ್ಟಿ ಕೂಡಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!