Friday, June 5, 2026
Homeತಾಜಾ ಸುದ್ದಿಐದು ರೂಪಾಯಿ ಕುರ್ಕುರೆ ತೆಗೆದುಕೊಡಲು ನಿರಾಕರಿಸಿದ ಗಂಡ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹೆಂಡತಿ

ಐದು ರೂಪಾಯಿ ಕುರ್ಕುರೆ ತೆಗೆದುಕೊಡಲು ನಿರಾಕರಿಸಿದ ಗಂಡ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹೆಂಡತಿ

- Advertisement -
- Advertisement -

ಆಗ್ರಾ: ಪತಿ ಐದು ರೂಪಾಯಿ ಕುರ್ಕುರೆ ತೆಗೆದುಕೊಡಲು ನಿರಾಕರಿಸಿದ್ದಕ್ಕೆ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವಿಚಿತ್ರ ಘಟನೆ ಆಗ್ರಾದಲ್ಲಿ ನಡೆದಿದೆ.

ಕುಟುಂಬ ಸಲಹಾ ಕೇಂದ್ರದ ಸಲಹೆಗಾರ ಡಾ. ಸತೀಶ್ ಖಿರ್ವಾರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಕುರುಕುರೆ ಅಂದ್ರೆ ವಿಪರೀತ ಕ್ರೇಜ್ ಹೊಂದಿದ್ದ ಪತ್ನಿ, ಪತಿಯ ಬಳಿ ಕುರುಕರೆ ತರಲು ಹೇಳಿದ್ದಾಳೆ. ಆದರೆ ಪತಿ ನಿರಾಕರಿಸಿದ್ದಾನೆ. ಇದೇ ವಿಚಾರಕ್ಕೆ ಜಗಳನಾಗಿ ಆಕೆ ತಾಯಿ ಮನೆ ಸೇರಿದ್ದಾಳೆ.ಕಳೆದ ಎರಡು ತಿಂಗಳುಗಳಿಂದ ಅಲ್ಲಿಯೇ ಇದ್ದಾಳೆ.

ಮದುವೆಯಾಗಿ ಒಂದು ವರ್ಷವಾಗಿದ್ದು, ಆರಂಭದಲ್ಲಿ ಚೆನ್ನಾಗಿದ್ದರು ಎನ್ನಲಾಗಿದೆ. ವೃತ್ತಿಯಲ್ಲಿ ಬೆಳ್ಳಿ ಕುಶಲಕರ್ಮಿಯಾಗಿರುವ ಪತಿ, ಮದುವೆಯಾದ ಮೊದಲ ಆರು ತಿಂಗಳಲ್ಲಿ ಪತ್ನಿಯ ಆದ್ಯತೆಗಳ ಬಗ್ಗೆ ಗಮನ ಹರಿಸುತ್ತಿದ್ದ. ಆದಾಗ್ಯೂ, ಅದರ ನಂತರ ಅವನ ವರ್ತನೆ ಬದಲಾಗಿದ್ದು, ಇದೇ ವಿಚ್ಛೇದನಕ್ಕೆ ಕಾರಣ ಎಂದಿದ್ದಾಳೆ.

- Advertisement -

Latest News

error: Content is protected !!