Wednesday, June 3, 2026
Homeಕರಾವಳಿಎಂಡಿಎಂಎ ಕಳ್ಳ ಸಾಗಾಟಕ್ಕೆ ಯತ್ನ; ಸುಳ್ಯದ ಇಬ್ಬರು ಯುವಕರನ್ನು ಬಂಧಿಸಿದ ಕೇರಳದ ಪೊಲೀಸರು 

ಎಂಡಿಎಂಎ ಕಳ್ಳ ಸಾಗಾಟಕ್ಕೆ ಯತ್ನ; ಸುಳ್ಯದ ಇಬ್ಬರು ಯುವಕರನ್ನು ಬಂಧಿಸಿದ ಕೇರಳದ ಪೊಲೀಸರು 

- Advertisement -
- Advertisement -

ಕೇರಳ; ಎಂಡಿಎಂಎ ಕಳ್ಳ ಸಾಗಾಟಕ್ಕೆ ಯತ್ನಿಸಿದ  ಸುಳ್ಯದ ಇಬ್ಬರು ಯುವಕರನ್ನು ಕೇರಳದ ಅಬಕಾರಿ ಪೋಲಿಸರು ಬಂಧಿಸಿದ್ದಾರೆ. ಸುಳ್ಯದ ಅಲೆಟ್ಟಿ ಗ್ರಾಮದ ನಿವಾಸಿಗಳಾದ ಉಮ್ಮರ್ ಫಾರೂಕ್ (33) ಮತ್ತು ಎ.ಎಚ್.ಸಿದ್ದೀಕ್ ಬಂಧಿತರು.

ಆರೋಪಿಗಳು ಬೆಂಗಳೂರಿನಿಂದ 1.5 ಲಕ್ಷ ರೂ.ಗೆ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತಲುಪಿಸಲು ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ. ಮಾನಂದವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ ಪ್ರಜಿತ್ ನೇತೃತ್ವದ ತಂಡವು ಕೇರಳ ಮಾನಂದವಾಡಿಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ  ಬಂಧಿಸಿದ್ದಾರೆ

ಆರೋಪಿಗಳು ಬೆಂಗಳೂರಿನಿಂದ ಖರೀದಿಸಿದ್ದ ಎಂಡಿಎಂಎಯನ್ನು ಪ್ರತಿ ಗ್ರಾಂಗೆ 4000 ರೂ.ಗೆ ಮಾರಾಟ ಮಾಡಲು ಕಳ್ಳಸಾಗಣೆ ಮಾಡಿದ್ದರು.ಕಳ್ಳಸಾಗಣೆ ಮಾಡಲು ಬಳಸಿದ ಸ್ವಿಫ್ಟ್ ಡಿಸೈರ್ ಕಾರನ್ನು ಅಬಕಾರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!