Wednesday, June 3, 2026
Homeಕರಾವಳಿತಮ್ಮ ಪಕ್ಷ ತೊರೆದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಬೆಂಬಲ ಸೂಚಿಸಿದ ಜೆಡಿಎಸ್‌ ಮುಖಂಡರು..! 

ತಮ್ಮ ಪಕ್ಷ ತೊರೆದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಬೆಂಬಲ ಸೂಚಿಸಿದ ಜೆಡಿಎಸ್‌ ಮುಖಂಡರು..! 

- Advertisement -
- Advertisement -

ಪುತ್ತೂರು: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಹೊಡೆತ ಬಿದ್ದಿದ್ದು, ಜಿಲ್ಲೆಯ ಸ್ಥಳೀಯರು ನಾಯಕರು ಸೇರಿದಂತೆ ರಾಜ್ಯ ನಾಯಕರು ಜೆಡಿಎಸ್ ಗೆ ವಿದಾಯ ಹೇಳಿದ್ದಾರೆ.

ಜೆಡಿಎಸ್ ಮುಖಂಡರು ಪುತ್ತೂರಿನಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾವೆಲ್ಲ ಜೆಡಿಎಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಅಧ್ಯಕ್ಷರು ಮಾಧ್ಯಮಕ್ಕೆ ನೀಡುತ್ತಿರುವ ಹೇಳಿಕೆಗಳನ್ನು ನೋಡುತ್ತಿದ್ದೇವೆ. ಇವರು ಅಧಿಕಾರದ ದಾಹಕ್ಕೆ ಸಿಲುಕಿ ಈ ಪಕ್ಷದ ಜಾತ್ಯಾತೀತ ನಿಲುವನ್ನು ಸಂಪೂರ್ಣವಾಗಿ ಮಣ್ಣು ಮಾಡಿದ್ದಾರೆ. ಮಾತ್ರವಲ್ಲ ನಮ್ಮಂತ ಜಾತ್ಯತೀತ ನಿಲುವನ್ನು ಹೊಂದಿದವರಿಗೆ ಅಲ್ಲಿ ಉಸಿರು ಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಈಗ ಜೆಡಿಎಸ್ ಪಕ್ಷ ಕೋಮುವಾದಿ ಪಕ್ಷಗಳ ಜೊತೆ ಸೇರಿ ಅವರನ್ನು ಒಲೈಸಲು ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ. ಇದಕ್ಕಾಗಿ ನಾವು ಕಾಂಗ್ರೇಸ್‌ಗೆ ಬೆಂಬಲ ಸೂಚಿಸುತ್ತೇವೆ,’ ಎಂದು ತಿಳಿಸಿದರು.

- Advertisement -

Latest News

error: Content is protected !!