Thursday, June 4, 2026
Homeಕರಾವಳಿಜೀ ಕನ್ನಡ ಡ್ರಾಮಾ ಜೂನಿಯರ್‌ ಸೀಸನ್‌5 ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ; ಮಂಗಳೂರಿನ ಖ್ಯಾತ...

ಜೀ ಕನ್ನಡ ಡ್ರಾಮಾ ಜೂನಿಯರ್‌ ಸೀಸನ್‌5 ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ; ಮಂಗಳೂರಿನ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರರ ಮಗಳು ರಿಷಿಕಾ ಕುಂದೇಶ್ವರ

- Advertisement -
- Advertisement -

ಬೆಂಗಳೂರು: ಜೀ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುವ ಡ್ರಾಮಾ ಜೂನಿಯರ್ಸ್ ಸೀಸನ್-‌5ರ ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.

ರಿಷಿಕಾ ಅವರು ಮಂಗಳೂರಿನ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ. ವಿಷ್ಣು ಕುಣಿಗಲ್ ಅವರು ವೆಂಕಟೇಶ್, ರಾಜೇಶ್ವರಿ ದಂಪತಿ ಪುತ್ರಿ.

ರಿಷಿಕಾ ಅವರು ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು
ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ಫೈನಲ್‌ಗೆ ಲಗ್ಗೆ ಹಾಕಿದ್ದರು.

- Advertisement -

Latest News

error: Content is protected !!