Sunday, June 14, 2026
Homeತಾಜಾ ಸುದ್ದಿಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಬರ್ಬರ ಹತ್ಯೆ ಪ್ರಕರಣ; ಆರೋಪಿ ಫಯಾಜ್ ರುಂಡ ಚಂಡಾಡಿದವರಿಗೆ 10...

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾ ಬರ್ಬರ ಹತ್ಯೆ ಪ್ರಕರಣ; ಆರೋಪಿ ಫಯಾಜ್ ರುಂಡ ಚಂಡಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ

- Advertisement -
- Advertisement -

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಫಯಾಜ್ ರುಂಡ ಚಂಡಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಜಯ ಕರ್ನಾಟಕ ಅಧ್ಯಕ್ಷ ಹಿಜರಿ ಘೋಷಣೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಫಯಾಜ್ ರುಂಡ ಚಂಡಾಡಿದರೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಯಾರು ಆರೋಪಿ ಫಯಾಜ್ ರುಂಡವನ್ನು ಚಂಡಾಡುತ್ತಾರೆ ಅವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಕೊಡುತ್ತೇವೆ ಎಂದಿದ್ದಾರೆ.

ನಾವು ನಾಳೆ ಹುಬ್ಬಳ್ಳಿಯನ್ನು ಬಂದ್ ಮಾಡುತ್ತೇವೆ. ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಅವರೆಲ್ಲರೂ ನಮ್ಮ ಬಂದಗೆ ಬೆಂಬಲ ಕೊಡಬೇಕು. ನಾವು ಮೆರವಣಿಗೆ ಮೂಲಕ ನಾಳೆ ಹುಬ್ಬಳ್ಳಿ ಬಂದ್ ಮಾಡುತ್ತೇವೆ ಎಂದು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಜಾರಿ ಹೇಳಿದ್ದಾರೆ,

- Advertisement -

Latest News

error: Content is protected !!