Sunday, June 7, 2026
Homeಕರಾವಳಿರಸ್ತೆಬದಿಯ ಸ್ಟಾಲ್ ನಲ್ಲಿ ಅಡುಗೆ ಅನಿಲ ಸೋರಿಕೆ; ಬೆಂಕಿ ಅನಾಹುತ

ರಸ್ತೆಬದಿಯ ಸ್ಟಾಲ್ ನಲ್ಲಿ ಅಡುಗೆ ಅನಿಲ ಸೋರಿಕೆ; ಬೆಂಕಿ ಅನಾಹುತ

- Advertisement -
- Advertisement -

ಮಂಗಳೂರು: ದೇರಳಕಟ್ಟೆಯಲ್ಲಿ ರಸ್ತೆಬದಿಯಲ್ಲಿ ಇರಿಸಲಾದ ‘ಸ್ವೀಟ್ ಕಾರ್ನರ್ ಸ್ಟಾಲ್’ ಎಂಬ ತಳ್ಳುಗಾಡಿಯ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಅನಿಲ ಸೋರಿಕೆ ಉಂಟಾಗಿ ಗುರುವಾರ ಸಂಜೆ ತಳ್ಳುಗಾಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ಬಶೀರ್ ಎಂಬವರು ಸ್ಟಾಲ್ ನಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ಸಂದರ್ಭ ಅನಿಲ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳದಲ್ಲಿದ್ದ ಗ್ರಾಹಕರು ಹಾಗೂ ಬಷೀರ್ ಓಡಿ ಪಾರಾದರು. ಸಾರ್ವಜನಿಕರು ಹೊಯ್ಗೆ ಎರಚಿ, ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ  ತಳ್ಳುಗಾಡಿಯು ಭಾಗಶಃ ಸುಟ್ಟುಹೋಗಿದೆ.

- Advertisement -

Latest News

error: Content is protected !!