Sunday, June 7, 2026
Homeಕರಾವಳಿಮಂಗಳೂರುಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿ

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿ

- Advertisement -
- Advertisement -

ಮೂಡಬಿದಿರೆ: ಮೆದುಳು ಜ್ವರಕ್ಕೆ 10ನೇ ತರಗತಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಶಿರ್ತಾಡಿ ಮೌಂಟ್‌ ಕಾರ್ಮೆಲ್‌ ಹೈಸ್ಕೂಲ್‌ನ 10ನೇ ತರಗತಿಯ ಸ್ವಸ್ತಿ ಶೆಟ್ಟಿ (15) ಮೃತ ವಿದ್ಯಾರ್ಥಿನಿ.

ಸ್ವಸ್ತಿ ಶೆಟ್ಟಿ ಮೆದುಳು ಜ್ವರ ಉಲ್ಬಣಗೊಂಡ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.ಉತ್ತಮ ತ್ರೋಬಾಲ್‌ ಆಟಗಾರ್ತಿಯಾಗಿದ್ದ ಈಕೆ ಉತ್ತಮ ನೃತ್ಯಪಟುವೂ ಆಗಿದ್ದಳು.

ತಂದೆ ಸತೀಶ್‌ ಶೆಟ್ಟಿ ಗೋವಾದಲ್ಲಿ ಉದ್ಯೋಗದಲ್ಲಿದ್ದು ತಾಯಿ ಸರಿತಾ ಶೆಟ್ಟಿ ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಉದ್ಯೋಗಿ. ಮೂಲತಃ ವಾಲ್ಪಾಡಿಯವರಾದ ಇವರು ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿದ್ದಾರೆ.

- Advertisement -

Latest News

error: Content is protected !!