Saturday, June 6, 2026
Homeಚಿಕ್ಕಮಗಳೂರುಮೂಡಿಗೆರೆ : ಗಾಂಜಾ ಮಾರಾಟ ಮಾಡಲು ಯತ್ನ; ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

ಮೂಡಿಗೆರೆ : ಗಾಂಜಾ ಮಾರಾಟ ಮಾಡಲು ಯತ್ನ; ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

- Advertisement -
- Advertisement -

ಚಿಕ್ಕಮಗಳೂರು :  ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಮಾರ್ಚ್ 31 ರಂದು ಮೂಡಿಗೆರೆ ಪಟ್ಟಣದ ಛತ್ರಮೈದಾನದಲ್ಲಿ ಉಮ್ಮರ್ ಫಾರೂಕ್ ಬಿನ್ ಮೊಹಮ್ಮದ್ ಫಾರೂಕ್ ವಾಸ ಬೆಳ್ತಂಗಡಿ ಹಾಗೂ ಅಬ್ದುಲ್ ಅಕ್ರಂ ಬಿನ್ ಉಮ್ಮರ್ ಬೆಳ್ತಂಗಡಿ ಇವರುಗಳು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮೂಡಿಗೆರೆ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ಬಳಿ  ಅಕ್ರಮವಾಗಿ ಹೊಂದಿದ್ದ 10,000/ ರೂ ಬೆಲೆಯ ಸುಮಾರು 650 ಗ್ರಾಂ ತೂಕದ ಒಣ ಗಾಂಜಾವನ್ನು  ಅಮಾನತ್ತುಪಡಿಸಿಕೊಂಡಿದ್ದಾರೆ.

ಆರೋಪಿತರ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ಗಳಾದ ಶ್ರೀನಾಥ್ ರೆಡ್ಡಿ, ಕಿಶೋರ್, ಎ.ಎಸ್.ಐ. ತಿಮ್ಮಪ್ಪ, ಸಿಬ್ಬಂದಿಯಾದ ವೈಭವ್, ದಯಾನಂದ್, ಇಮ್ತಿಯಾಜ್ ಪಾಷಾ ಪಾಲ್ಗೊಂಡಿರುತ್ತಾರೆ.

- Advertisement -

Latest News

error: Content is protected !!