Saturday, June 6, 2026
HomeUncategorizedಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಾಲಾ ಸಂಚಾಲಕ; ಶಿಕ್ಷಕಿಯಿಂದ ದೂರು

ಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಾಲಾ ಸಂಚಾಲಕ; ಶಿಕ್ಷಕಿಯಿಂದ ದೂರು

- Advertisement -
- Advertisement -

ಕುಂದಾಪುರ: ಇಲ್ಲಿನ ಬಸ್ರೂರಿನ ಶಾಲೆಯೊಂದರ ಶಿಕ್ಷಕಿಯೊಂದಿಗೆ ಶಾಲೆಯ ಸಂಚಾಲಕ ಅಸಭ್ಯವಾಗಿ ವರ್ತಿಸಿದ್ದು, ಈ ಕುರಿತು ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಲೆಯ ಉಪಪ್ರಾಂಶುಪಾಲೆ ನೀಡಿದ ದೂರಿನಂತೆ, ‘ಶಾಲೆಯ ಸಂಚಾಲಕ ಸಂತೋಷ್‌ ಶೆಟ್ಟಿ ಎನ್ನುವಾತ ತನ್ನೊಂದಿಗೆ ಕೊಠಡಿಯಲ್ಲಿ ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದು, ಆನಂತರ ನಾನು ಕೆಲಸಕ್ಕೆ ಬರಬಾರದೆಂದು ಕೂಗಾಡಿರುವುದಾಗಿ,’ ದೂರು ಸಲ್ಲಿಸಿದ್ದಾರೆ.

ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಸಂತೋಷ್‌ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!