Friday, October 16, 2026
Homeಉದ್ಯಮಗಗನಕ್ಕೇರಿದ ಚಿನ್ನ–ಬೆಳ್ಳಿ ದರ; 10 ಗ್ರಾಂ ಚಿನ್ನದ ಬೆಲೆ ₹1,070 ರಷ್ಟು ಹೆಚ್ಚಳ

ಗಗನಕ್ಕೇರಿದ ಚಿನ್ನ–ಬೆಳ್ಳಿ ದರ; 10 ಗ್ರಾಂ ಚಿನ್ನದ ಬೆಲೆ ₹1,070 ರಷ್ಟು ಹೆಚ್ಚಳ

- Advertisement -
- Advertisement -

ನವದೆಹಲಿ: ಚಿನ್ನ-ಬೆಳ್ಳಿ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ‘ಜಾಗತಿಕ ಮಟ್ಟದ ಬೇಡಿಕೆ ಹೆಚ್ಚಳದಿಂದಾಗಿ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹1,070ರಷ್ಟು ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ₹68,420ಕ್ಕೆ ಸೋಮವಾರ ಮಾರಾಟವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.  

ಇನ್ನು ಚಿನ್ನದ ಬೆಲೆ ಹಿಂದಿನ ಮಾರಾಟದಲ್ಲಿ ಪ್ರತಿ 10 ಗ್ರಾಂಗೆ ₹67,350ರಷ್ಟು ದಾಖಲಾಗಿತ್ತು.  ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕೆ.ಜಿ.ಗೆ ₹1,120ರಷ್ಟು ಹೆಚ್ಚಳವಾಗಿದೆ. ಈ ಹಿಂದೆ ಪ್ರತಿ ಕೆ.ಜಿ. ಬೆಳ್ಳಿ ಬೆಲೆ ₹77,450ರಷ್ಟಿತ್ತು. ಸೋಮವಾರ ಇದು ₹78,570ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ವಿಶ್ಲೇಷಕ ದಿಲೀಪ್ ಪಾರ್ಮಾರ್, ‘ಬಡ್ಡಿ ದರ ಇಳಿತಕ್ಕೆ ಅಮೆರಿಕದ ಫೆಡರಲ್ ರಿಸರ್ವ್ ಕ್ರಮ ಕೈಗೊಂಡ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡಿದೆ. ಇದರ ಜತೆಯಲ್ಲಿ ಚೀನಾದಿಂದಲೂ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ’ ಎಂದು ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,265.73 ಅಮೆರಿಕನ್ ಡಾಲರ್‌ನಷ್ಟಾಗಿದೆ. ಹೀಗಾಗಿ ಎಂಸಿಎಕ್ಸ್ ಪ್ಯೂಚರ್‌ನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ಬೆಲೆ ₹69,487ರಷ್ಟು ದಾಖಲಾಗಿದೆ.

- Advertisement -

Latest News

error: Content is protected !!