Sunday, June 7, 2026
Homeಕರಾವಳಿಬಾಡಿಗೆಗೆ ಎಂದು ತೆರಳಿದ ಆಟೋರಿಕ್ಷಾ ಚಾಲಕ ನಾಪತ್ತೆ

ಬಾಡಿಗೆಗೆ ಎಂದು ತೆರಳಿದ ಆಟೋರಿಕ್ಷಾ ಚಾಲಕ ನಾಪತ್ತೆ

- Advertisement -
- Advertisement -

ಮಲ್ಪೆ: ಇಲ್ಲಿನ ಆಟೋರಿಕ್ಷಾ ಚಾಲಕನೋರ್ವ ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ತೆರಳಿದ್ದು, ನಂತರದಲ್ಲಿ ಮನೆಗೂ ಬಾರದೆ ಮಾ. 27ರ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಆಟೋರಿಕ್ಷಾ ಚಾಲಕ ಮೂಡುತೋನ್ಸೆ ಗ್ರಾಮದ ಮಹಮ್ಮದ್‌ ಫೈಜಲ್‌ (36) ಎಂದು ತಿಳಿದು ಬಂದಿದೆ.

ಈತನ ಪತ್ನಿ ಫೈಜಲ್‌ ಪತಿ ತಡರಾತ್ರಿಯಾದರೂ ಮನೆಗೆ ಬಾರದ್ದನ್ನು ಕಂಡು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್‌ ಬರುತ್ತಿತ್ತು. ಅವರ ಆಟೋರಿಕ್ಷಾ ಮನೆ ಬಳಿಯ ಮೈದಾನದ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ. ಫೈಜಲ್‌ ಅವರು ಆಟೋರಿಕ್ಷಾ ಚಾಲಕ ವೃತ್ತಿಯ ಜತೆಗೆ ಟೈಲ್ಸ್‌ ಜೋಡಿಸುವ ಕೆಲಸವನ್ನೂ ಸಹ ಮಾಡಿಕೊಂಡಿದ್ದರು. ಕಾಣೆಯಾದ ವ್ಯಕ್ತಿಯ ಎತ್ತರ 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಅವರ ಸುಳಿವು ಸಿಕ್ಕವರು ಮಲ್ಪೆ ಠಾಣೆಗೆ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.

- Advertisement -

Latest News

error: Content is protected !!