Monday, June 8, 2026
Homeಕರಾವಳಿಬೆಳ್ತಂಗಡಿ: ಮಗ ಹಾಗೂ ಸೊಸೆಯಿಂದ ಹಲ್ಲೆಗೆ ಯತ್ನ ಆರೋಪ; ದೂರು ನೀಡಿದ ವೃದ್ಧೆ

ಬೆಳ್ತಂಗಡಿ: ಮಗ ಹಾಗೂ ಸೊಸೆಯಿಂದ ಹಲ್ಲೆಗೆ ಯತ್ನ ಆರೋಪ; ದೂರು ನೀಡಿದ ವೃದ್ಧೆ

- Advertisement -
- Advertisement -

ಬೆಳ್ತಂಗಡಿ: ಮಗ ಹಾಗೂ ಸೊಸೆಯಿಂದ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ವೃದ್ಧೆ ದೂರು ನೀಡಿರುವ ಘಟನೆ ಬಡಗಕಾರಂದೂರು ಎಂಬಲ್ಲಿ ನಡೆದಿದೆ.

ಬಡಗಕಾರಂದೂರು ನಿವಾಸಿ ಸಿಸಿಲಾ ವೇಗಸ್‌ (79) ಎಂಬವರು ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಾ. 15ರಂದು ಮಗ ಸವೇರ ಪಿರೇರ ದೊಣ್ಣೆ ಹಿಡಿದು ಮನೆ ಗೇಟಿನ ಹೊರಗಡೆ ನಿಂತುಕೊಂಡಿದ್ದು, ಆತನ ಪತ್ನಿ ಶಾಂತಿ ಗ್ರೇಟಾ ಪಿರೇರಾ ಕಲ್ಲು ಹಿಡಿದುಕೊಂಡು ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನಿಂದ ಹೊಡೆಯಲು ಯತ್ನಿಸಿ ಜೀವಬೆದರಿಕೆ ಒಡ್ಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇನ್ನು ಮಾ. 26ರಂದು ಕೂಡ ಮಗ ಸವೇರ ಪಿರೇರ ಮನೆಯ ಬೇಲಿಯ ಸುತ್ತಲು ತಿರುಗಾಡುತ್ತಿದ್ದು, ಇದರಿಂದ ಮಹಿಳೆ ಹಾಗೂ ಅವರ ಗಂಡನಿಗೆ ಪ್ರಾಣ ಭಯ ಶುರುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ

- Advertisement -

Latest News

error: Content is protected !!