Sunday, June 7, 2026
Homeಕರಾವಳಿಹಿಂದುತ್ವದ ಬದ್ಧತೆ, ಅಭಿವೃದ್ಧಿಗೆ ಆದ್ಯತೆ; ಕ್ಯಾ. ಬ್ರಿಜೇಶ್ ಚೌಟ

ಹಿಂದುತ್ವದ ಬದ್ಧತೆ, ಅಭಿವೃದ್ಧಿಗೆ ಆದ್ಯತೆ; ಕ್ಯಾ. ಬ್ರಿಜೇಶ್ ಚೌಟ

- Advertisement -
- Advertisement -

ಮೂಡಬಿದ್ರೆ: ಹಿಂದುತ್ವದ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ. ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಕನ್ನಡ ಭವನದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಬಿಜೆಪಿ ಅಭ್ಯರ್ಥಿಗೆ ಈ ಬಾರಿ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದಲ್ಲಿ 50 ಸಾವಿರಕ್ಕಿಂತ ಅಧಿಕ ಮತಗಳ ಮುನ್ನಡೆ ದೊರಕಿಸುವ ಜವಾಬ್ದಾರಿಯಿದೆ ಎಂದರು.

ಪ್ರಮುಖರಾದ ಈಶ್ವರ್ ಕಟೀಲ್, ಸುದರ್ಶನ್ ಎಂ., ಚಂದ್ರಶೇಖರ್ ಬಪ್ಪಳಿಗೆ, ಲಕ್ಷ್ಮಣ ಪೂಜಾರಿ, ಸೋಮನಾಥ ಕೋಟ್ಯಾನ್, ನಾಗವರ್ಮ ಜೈನ್, ಶಾಂತಿಪ್ರಸಾದ್ ಹೆಗ್ಡೆ, ಸುನೀಲ್ ಅಳ್ವ, ರಂಜಿತ್ ಪೂಜಾರಿ ಭಾಗವಹಿಸಿದ್ದರು.

- Advertisement -

Latest News

error: Content is protected !!