Friday, June 5, 2026
Homeಕರಾವಳಿಬೆಳ್ತಂಗಡಿ: ಉಜಿರೆ ಮೋಹನ್ ಕುಮಾರ್ ಗೆ ಪ್ರತಿಷ್ಠಿತ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಪ್ರದಾನ

ಬೆಳ್ತಂಗಡಿ: ಉಜಿರೆ ಮೋಹನ್ ಕುಮಾರ್ ಗೆ ಪ್ರತಿಷ್ಠಿತ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಪ್ರದಾನ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ನ ಸಂಚಾಲಕ,ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲೀಕರಾದ ಮೋಹನ್ ಕುಮಾರ್ ಅವರು ಈ ವರ್ಷದ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಕ್ಕೆ ಭಾಜನರಾಗಿದ್ದಾರೆ.

ಮಾರ್ಚ್ 17ರ(ಇಂದು) ಭಾನುವಾರ ರಾತ್ರಿ 9 ಗಂಟೆಗೆ ಕ್ಕೆ ಮಂತ್ರಾಲಯ ಶ್ರೀ ಕ್ಷೇತ್ರದಲ್ಲಿ ಶ್ರೀಗಳಾದ ಡಾ.ಪರಮಪೂಜ್ಯ ಶ್ರೀಮತ್ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋಹನ್ ಕುಮಾರ್ ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ಹಲವಾರು ಸಮಯಗಳಿಂದ ಸಮಾಜ ಸೇವೆ ಹಾಗೂ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ 5 ಶಾಲೆಗಳನ್ನು ದತ್ತು ಸ್ವೀಕಾರ ಮಾಡಿ ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಮೋಹನ್ ಕುಮಾರ್ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ‌‌ ಗೌರವಿಸಲಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್, ಸಿರಿ ಸಂಸ್ಥೆಯ ಎಂಡಿ ಕೆ.ಎನ್.ಜನಾರ್ಧನ್ , ಉಜಿರೆ ಸಂಧ್ಯಾ ಟ್ರೆಡರ್ಸ್ ಮಾಲೀಕ ರಾಜೇಶ್ ಪೈ, ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ್ ಭಾಗಿಯಾಗಿದ್ದರು.

- Advertisement -

Latest News

error: Content is protected !!