Saturday, June 6, 2026
Homeತಾಜಾ ಸುದ್ದಿಬಾಲಿವುಡ್ ನಟನೊಂದಿಗೆ ಹಸೆಮಣೆಯೇರಿದ ಗೂಗ್ಲಿ ಚಿತ್ರದ ನಟಿ

ಬಾಲಿವುಡ್ ನಟನೊಂದಿಗೆ ಹಸೆಮಣೆಯೇರಿದ ಗೂಗ್ಲಿ ಚಿತ್ರದ ನಟಿ

- Advertisement -
- Advertisement -

ಕನ್ನಡ ಪ್ರೇಕ್ಷಕರ ಮನೆಗೆದ್ದಿದ್ದ ಗೂಗ್ಲಿ, ಚಿರು ಚಿತ್ರದ ನಟಿ ಕೃತಿ ಕರಬಂಧ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೃತಿ ಕರಬಂಧ 2019ರಲ್ಲಿ ತಮ್ಮ ಮೊಲದ ಚಿತ್ರ ತೆಲುಗಿನ ‘ಬೋನಿ” ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 2010ರಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಜೊತೆ ‘ಚಿರು’ ಚಿತ್ರದಲ್ಲಿ ನಟಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ್ದ ‘ಗೂಗ್ಲಿ’ ಚಿತ್ರ ಕೃತಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಶಿವರಾಜ್‌ಕುಮಾರ್ ಜೊತೆ ‘ಬೆಳ್ಳಿ’, ಉಪೇಂದ್ರ ಜೊತೆ ‘ಸೂಪರ್ ರಂಗ’ ಚಿತ್ರದಲ್ಲಿಯೂ ನಟಿಸಿದ್ದರು. 2019ರಲ್ಲಿ ಬಾಲಿವುಡ್‌ಗೆ ಕಾಲಿಟ್ಟಿದ್ದ ಕೃತಿ, ‘ರಾಜ್: ರಿಬೂಟ್’ ಚಿತ್ರದಲ್ಲಿ ನಟಿಸಿದ್ದರು. ತದನಂತರ ಬಾಲಿವುಡ್‌ನಲ್ಲಿಯೇ ಸಕ್ರಿಯರಾಗಿದ್ದರು.

ಪುಲ್ಕಿತ್ ಹಾಗೂ ಕೃತಿ ‘ಪಾಗಲ್‌ಪಂತಿ’ ಚಿತ್ರೀಕರಣದ ವೇಳೆ ಪರಸ್ಪರ ಭೇಟಿಯಾಗಿದ್ದು, ನಂತರದಲ್ಲಿ ಇಬ್ಬರು ಪರಸ್ಪರ ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಇದೀಗ ತಮ್ಮ ಮದುವೆಯ ಫೋಟೋಸ್ ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!