Friday, June 5, 2026
Homeಆರಾಧನಾಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ದರ್ಶನ್ ಭೇಟಿ; ಸುಮಲತಾಗೆ ಬೆಂಬಲ ನೀಡುವುದಾಗಿ ಸುಳಿವು ನೀಡಿದ ನಟ

ಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ದರ್ಶನ್ ಭೇಟಿ; ಸುಮಲತಾಗೆ ಬೆಂಬಲ ನೀಡುವುದಾಗಿ ಸುಳಿವು ನೀಡಿದ ನಟ

- Advertisement -
- Advertisement -

ಉಳ್ಳಾಲ: ನಟ ದರ್ಶನ್ ಸಹಿತ ಹಲವು ನಟರು ಕುತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆಯಲ್ಲಿ ನಟ ದರ್ಶನ್ ಸುದ್ದಿಗಾರರ, ಮಂಡ್ಯ ಸಂಸದೆ ಸುಮಲತಾ ಚುನಾವಣೆಗೆ ಸ್ಪರ್ಧಿಸಿದರೆ, ಅವರ ಪರ ಪ್ರಚಾರ ಕೈಗೊಳ್ಳುವ ಕುರಿತ ಪ್ರಶ್ನೆಗೆ, ‘ಹೆತ್ತ ತಾಯಿಯನ್ನು ಎಂದಾದರೂ ಬಿಟ್ಟು ಕೊಡಲಿಕ್ಕಾಗುತ್ತದೆಯೇ’ ಎಂದು ಪ್ರತಿಕ್ರಿಯಿಸಿದರು.

‘ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ, ಈಗ ಅವರ ಕೈ ಬಿಟ್ಟರೆ ಆಗುತ್ತದೆಯೇ ಸರ್. ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡುತ್ತೀರಾ. ಸುಮಲತಾ ಅಮ್ಮ ಅಮ್ಮನೇ ಸಾರ್’ ಎಂದರು. ‘ಮಂಗಳೂರಿಗೆ ಬಹಳಷ್ಟು ಸಲ ಬಂದಿದ್ದೇನೆ. ಆದರೆ ಕುತ್ತಾರಿಗೆ ಬರುವುದಕ್ಕೆ ಆಗಿರಲಿಲ್ಲ. ಈ ಕ್ಷೇತ್ರದ ಬಗ್ಗೆ ಅನೇಕರು ಹೇಳುತ್ತಿದ್ದರು. ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ’ ಎಂದರು.

‘ಏನು ಪ್ರಾರ್ಥನೆ ಮಾಡಿದಿರಿ’ ಎಂಬ ಪ್ರಶ್ನೆಗೆ ತುಸು ಸಿಟ್ಟಾದ ಅವರು, ‘ಅದನ್ನು ಹೇಳಿದರೆ ನೀವು ನಡೆಸಿಕೊಡುತ್ತೀರಾ’ ಎಂದು ಮರುಪ್ರಶ್ನೆ ಹಾಕಿದರು. ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ, ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ದೆಕ್ಕಾಡು ಕೊರಗಜ್ಜ ಆದಿಸ್ಥಳದ ಟ್ರಸ್ಟಿಗಳು ಇದ್ದರು.

ಕೊರಗಜ್ಜನ ದರ್ಶನಕ್ಕೆ ರಜಾ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ದರ್ಶನ್ ಜೊತೆ ಸೆಲ್ಸಿ ತೆಗೆಯಲು ಜನ ಮುಗಿಬಿದ್ದರು. ದರ್ಶನ್‌ ಅವರ ಭದ್ರತಾ ಸಿಬ್ಬಂದಿ ಅದಕ್ಕೆ ಅವಕಾಶ ನೀಡದೇ, ತಳ್ಳಿದ್ದು ಅಭಿಮಾನಿಗಳಿಗೆ ಮುಜುಗರವನ್ನುಂಟು ಮಾಡಿತು.

- Advertisement -

Latest News

error: Content is protected !!