Thursday, June 4, 2026
Homeಚಿಕ್ಕಮಗಳೂರುನನ್ನ ಪತ್ನಿ ಗೀತಾ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆ ಆಗಿ ನೋಡುವ ಆಸೆ; ನಟ...

ನನ್ನ ಪತ್ನಿ ಗೀತಾ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆ ಆಗಿ ನೋಡುವ ಆಸೆ; ನಟ ಶಿವ ರಾಜ್‌ಕುಮಾರ್

- Advertisement -
- Advertisement -

ಶಿವಮೊಗ್ಗ: ನನ್ನ ಪತ್ನಿ ಗೀತಾ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್ ಟಿಕೆಟ್‌ ಕೊಟ್ಟರೆ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯೆ ಆಗಿ ನೋಡುವಾಸೆ ಇದೆ ಎಂದು ನಟ ಶಿವ ರಾಜ್‌ಕುಮಾರ್ ಹೇಳಿದರು.

ಅವರು ನಗರದ ಕಲ್ಲಹಳ್ಳಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು. ‘ಗೀತಾ ಎಂಪಿ ಆಗುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಲಿದ್ದಾರೆ. ಇನ್ನು ನಾನು ರಾಜಕೀಯಕ್ಕೆ ಬರೊಲ್ಲ. ಅದರ ಬಗ್ಗೆ ಆಸಕ್ತಿ ಇಲ್ಲ. ರಾಜಕೀಯದಲ್ಲಿದ್ದುಕೊಂಡು ಜನರ ಸೇವೆ ಮಾಡೋದು ಗೊತ್ತಿಲ್ಲ. ಕಷ್ಟ ಅಂತ ಬಂದವರಿಗೆ ಹಣ ಕೊಟ್ಟು ಕಳುಹಿಸುವೆ. ಆದರೆ ರಾಜಕಾರಣ ಗೊತ್ತಿಲ್ಲ. ಆದರೆ ಗೀತಾ ಅದೇ ಕುಟುಂಬದಿಂದ ಬಂದವರು. ರಾಜಕೀಯ ಅವರಿಗೆ ರಕ್ತದಲ್ಲಿ ಬಂದಿದೆ. ಅವರು ಎಂಪಿ ಆಗಿ ಆಯ್ಕೆಯಾದರೆ ಸಂತೋಷ,’ ಎಂದು ತಿಳಿಸಿದರು.

ತಮ್ಮ ಮುಂದಿನ ಚಿತ್ರ ‘ಕರಟಕ ಧಮನಕ’ದ ಕಥೆ ಚೆನ್ನಾಗಿದೆ. ಬೇರೆ ಹೆಸರು ಇಡಬಹುದಿತ್ತು. ಆದರೆ ಕಥೆಗಾಗಿ ಅದೇ ಸಿನಿಮಾ ಟೈಟಲ್ ಉಳಿಸಿಕೊಳ್ಳಲಾಗಿದೆ ಎಂದರು.

- Advertisement -

Latest News

error: Content is protected !!