Wednesday, June 3, 2026
Homeಕರಾವಳಿಬೆಳ್ತಂಗಡಿಯ ವಕೀಲರ ಸಂಘದಿಂದ ’ಕಾನೂನು ಕಟ್ಟೆ' ಕಾರ್ಯಕ್ರಮ

ಬೆಳ್ತಂಗಡಿಯ ವಕೀಲರ ಸಂಘದಿಂದ ’ಕಾನೂನು ಕಟ್ಟೆ’ ಕಾರ್ಯಕ್ರಮ

- Advertisement -
- Advertisement -

ಬೆಳ್ತಂಗಡಿ: ವಕೀಲರ ಸಂಘ(ರಿ)ಬೆಳ್ತಂಗಡಿ ಹಾಗೂ ಯುವ ವಕೀಲರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ದಿನಾಂಕ 28.02.2024 ಬುಧವಾರದಂದು 3.30 ಗಂಟೆಗೆ “ವಕೀಲರ ಭವನ”ದಲ್ಲಿ ಯುವ ವಕೀಲರಿಗೆ ‘ಕಾನೂನು ಕಟ್ಟೆ’ ವಕೀಲರಿಂದ, ವಕೀಲರಿಗಾಗಿ, ವಕೀಲರಿಗೋಸ್ಕರ ನೇರ ಸಂವಾದ/ಮುಖಾಮುಖಿ ಚರ್ಚೆಯನ್ನು ಹಮ್ಮಿಕೊಳ್ಳಲಾಯಿತು.

ಕಾನೂನು ಕಟ್ಟೆ ಕಾರ್ಯಕ್ರಮದಲ್ಲಿ ‘ಆರ್ಟ್ ಆಫ್ Cross Examination in Criminal Cases’ ವಿಚಾರದ ಕುರಿತು ಸಂಪನ್ಮೂಲ ವ್ಯಕಿಗಳಾಗಿ ಆಗಮಿಸಿದ್ದ ಬೆಳ್ತಂಗಡಿ ವಕೀಲರ ಸಂಘದ ಹಿರಿಯ ವಕೀಲರಾದ ಜೆ.ಕೆ ಪೌಲ್ ಮತ್ತು ಪ್ರಶಾಂತ್ ಎಂ ಮಾಹಿತಿಯನ್ನು ನೀಡಿ ಯುವ ವಕೀಲರ ಜೊತೆ ಚರ್ಚೆಯನ್ನು ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವಕೀಲರ ವೇದಿಕೆಯ ಅಧ್ಯಕ್ಷ ಸಂದೀಪ್ ಡಿಸೋಜ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲ ಸಂಘದ ಅಧ್ಯಕ್ಷ  ವಸಂತ ಮರಕಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿಯ ವಕೀಲರ ಸಂಘದ ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ, ಯುವ ವಕೀಲರ ವೇದಿಕೆಯ ಕಾರ್ಯದರ್ಶಿ ಜ್ಯೋತ್ನ್ನ ವೆಲೋನ್ನಾ ಕೊರೆಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಸ್ಮಾ ಸ್ವಾಗತಿಸಿ, ಜಿತೇಶ್ ಕುಲಾಲ್ ಧನ್ಯವಾದಗಳನ್ನಾಡಿದರು. 
 

- Advertisement -

Latest News

error: Content is protected !!