Wednesday, June 3, 2026
Homeಕರಾವಳಿಉಡುಪಿಪ್ರವಾಸಕ್ಕೆ ಬಂದ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವು

ಪ್ರವಾಸಕ್ಕೆ ಬಂದ ಇಬ್ಬರು ಯುವಕರು ನದಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಉಡುಪಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ನೆಲ್ಲಿಕಟ್ಟೆಯ ಸೀತಾ ನದಿ ನೀರಿನಲ್ಲಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟವರು ಕೊಪ್ಪ ಮೂಲದ ಡಾ. ದೀಪಕ್ ಮತ್ತು ಶಿವಮೊಗ್ಗ ಮೂಲದ ಶೈನು ಡೇನಿಯಲ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಕೊಪ್ಪ ಮೂಲದ ಡಾ. ದೀಪಕ್ ಮತ್ತು ಶಿವಮೊಗ್ಗ ಮೂಲದ ಶೈನು ಡೇನಿಯಲ್ ಸೀತಾ ನದಿಯಲ್ಲಿ ಈಜಲು ಇಳಿದಿದ್ದು, ಈ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಪ್ರವಾಸಕ್ಕೆಂದು ಬಂದಿದ್ದ ಮೂವರು ಗೆಳೆಯರ ಪೈಕಿ ಇಬ್ಬರು ಈಜು ಬಾರದೆ ಮುಳುಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಶೃಂಗೇರಿಯಲ್ಲಿ ವೈದ್ಯರಾಗಿರುವ ಡಾ. ದೀಪಕ್ ಹಾಗೂ ಶಿವಮೊಗ್ಗದ ವ್ಯಾಪಾರಿ ಶೈನು ಡೇನಿಯಲ್ ಸಾವನ್ನಪ್ಪಿದ್ದಾರೆ.

ಹೆಬ್ರಿಗೆ ಪ್ರವಾಸಕ್ಕೆ ಬಂದು ವಾಪಾಸ್ಸಾಗುವ ವೇಳೆಯಲ್ಲಿ ನದಿಗೆ ಇಳಿದಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!