Wednesday, June 3, 2026
Homeಕರಾವಳಿಎರಡು ರಿಕ್ಷಾ ಮುಖಾಮುಖಿ ಢಿಕ್ಕಿ; ಹಲವರಿಗೆ ಗಾಯ

ಎರಡು ರಿಕ್ಷಾ ಮುಖಾಮುಖಿ ಢಿಕ್ಕಿ; ಹಲವರಿಗೆ ಗಾಯ

- Advertisement -
- Advertisement -

ವಿಟ್ಲ: ಇಲ್ಲಿನ ಅಡ್ಯನಡ್ಕ ರಸ್ತೆಯ ಪಡಿಬಾಗಿಲು ಎಂಬಲ್ಲಿ ಎರಡು ರಿಕ್ಷಾಗಳ ನಡುವೆ ಅಪಘಾತ ಸಂಭವಿಸಿ 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.

ರಿಕ್ಷಾಗಳು ಎರುಂಬು ನಿವಾಸಿ ಹಮೀದ್ ಎರುಂಬು ಹಾಗೂ ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಅವರದಾಗಿದ್ದು, ನೇರ ರಸ್ತೆಯಲ್ಲಿ ಢಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಇನ್ನು ಒಬ್ಬರ ಪರಿಸ್ಥಿತಿ ಚಿಂತಾಜನಕ ಇದೆ ಎಂದು ಹೇಳಲಾಗಿದೆ.

ಗಾಯಗೊಂಡವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳುಹಿಸುವ ಕಾರ್ಯವಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!