Thursday, June 4, 2026
Homeಕರಾವಳಿಬೆಳ್ತಂಗಡಿ: ಸರ್ವೆಯರ್ ವಿಶ್ವನಾಥ್ ರಾವ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಸರ್ವೆಯರ್ ವಿಶ್ವನಾಥ್ ರಾವ್ ಹೃದಯಾಘಾತದಿಂದ ನಿಧನ

- Advertisement -
- Advertisement -

ಬೆಳ್ತಂಗಡಿ : ಭೂಮಾಪನ  ಇಲಾಖೆಯ ಪರವಾನಿಗೆ ಪಡೆದುಕೊಂಡು ಭೂ ಮಾಪಕರಾಗಿ( ಸರ್ವೆಯರ್) ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವನಾಥ್ ರಾವ್ ಅವರು ಲೋ ಬಿಪಿಯಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ಆಡಳಿತ ಸೌಧದಲ್ಲಿರುವ ಭೂಮಾಪನ ಶಾಖೆಯಲ್ಲಿ ಕಳೆದ 18 ವರ್ಷಗಳಿಂದ ಸರಕಾರದ ಪರವಾನಿಗೆ ಪಡೆದಕೊಂಡು ಭೂಮಾಪಕರಾಗಿ(ಸರ್ವೆಯರ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಜಿಲ್ಲೆಯ ಬೆಲೂರು ನಿವಾಸಿ ವಿಶ್ವನಾಥ್ ರಾವ್(45) ಅವರು ಬೆಳ್ತಂಗಡಿಯ ಲಾಯಿಲದ ಬಳಿ ಬಾಡಿಗೆ ಮನೆಯಲ್ಲಿ ಫೆ.13 ರಂದು ಬೆಳಗ್ಗೆ ತಿಂಡಿ ತಿಂದು ಕುಳಿತ್ತಿದ್ದಾಗ ಹೃದಯದಲ್ಲಿ ನೋವು ಕಾಣಿಸಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಲೋ ಬಿಪಿ ಆಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಹೋಗಲು ವೈದ್ಯರು ಸೂಚಿಸಿದ್ದು ಅದರಂತೆ ಆಂಬುಲೆನ್ಸ್ ಮೂಲಕ ಹೋಗುವಾಗ ಬಂಟ್ವಾಳದ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ವಿಶ್ವನಾಥ್ ರಾವ್ ಅವರ ಮೃತದೇಹವನ್ನು ಶವಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

- Advertisement -

Latest News

error: Content is protected !!