Friday, June 5, 2026
Homeಉದ್ಯಮಇಂಡಿಗೋ ವಿಮಾನ ಪ್ರಯಾಣ : ವೈದ್ಯರು, ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿ

ಇಂಡಿಗೋ ವಿಮಾನ ಪ್ರಯಾಣ : ವೈದ್ಯರು, ನರ್ಸ್‌ಗಳಿಗೆ ಶೇ.25ರಷ್ಟು ರಿಯಾಯಿತಿ

- Advertisement -
- Advertisement -

ನವದೆಹಲಿ: ಕರೊನಾ ವೈರಸ್‌ನ ಈ ಭೀಕರ ಸಮಯದಲ್ಲಿ ತಮ್ಮ ಕುಟುಂಬಸ್ಥರನ್ನೂ ದೂರ ಇರಿಸಿ, ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ವಿಮಾನ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ
2020 ಅಂತ್ಯದವರೆಗೆ ಈ ರಿಯಾಯಿತಿ ಇರಲಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಿ ರೋಗಿಗಳ ಜೀವ ಉಳಿಸುತ್ತಿರುವ ಕೊರೊನಾ ವಾರಿಯರ್ಸ್‌ಗಾಗಿ ಈ ರೀತಿಯ ಸೇವೆ ನೀಡಲು ಇಂಡಿಗೋ ಮುಂದಾಗಿದೆ.
ವೈದ್ಯರು ಮತ್ತು ನರ್ಸ್‌ಗಳು ವಿಮಾನಯಾನದ ವೇಳೆ ತಾವು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಗುರುತಿನ ಚೀಟಿ ತೋರಿಸಿದರೆ ಸಾಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೋನಾ ವೈರಸ್ ಲಾಕ್ ಡೌನ್ ನಂತರ ಮೇ 25 ರಿಂದ ದೇಶೀಯ ವಿಮಾನಯಾನ ಆರಂಭಿಸಿದೆ.

- Advertisement -

Latest News

error: Content is protected !!