Saturday, September 12, 2026
Homeಕರಾವಳಿಬೆಳ್ತಂಗಡಿ : ನೀರಚಿಲುಮೆ ಗ್ಯಾಸ್ ಸಿಲಿಂಡರ್ ತುಂಬಿದ ಪಿಕಪ್ ಪಲ್ಟಿ;ತಪ್ಪಿದ ಭಾರೀ ಅನಾಹುತ

ಬೆಳ್ತಂಗಡಿ : ನೀರಚಿಲುಮೆ ಗ್ಯಾಸ್ ಸಿಲಿಂಡರ್ ತುಂಬಿದ ಪಿಕಪ್ ಪಲ್ಟಿ;ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಬೆಳ್ತಂಗಡಿ : ಗ್ಯಾಸ್ ಸಿಲಿಂಡರ್ ತುಂಬಿದ ಪಿಕಪ್ ವಾಹನ ಆಟೋ ರಿಕ್ಷಾ ಅಡ್ಡಬಂದಿದ್ದರಿಂದ ನಿಯಂತ್ರಣ ತಪ್ಪಿ ಪಟ್ಟಿಯಾಗಿದೆ. ಗ್ಯಾಸ್ ಸಿಲಿಂಡ್ ರಸ್ತೆ ಎಸೆಯಲ್ಪಟ್ಟರು ಯಾವುದೇ ಅನಾಹುತ ಆಗದೆ ದುರಂತವೊಂದು ತಪ್ಪಿದ ಘಟನೆ ನೀರಚಿಲುಮೆಯಲ್ಲಿ ನಡೆದಿದೆ.

ಗುರುವಾಯನಕೆರೆಯಲ್ಲಿರುವ ಶ್ರೀ ಮಂಜು ಇಂಡಿಯನ್ ಗ್ಯಾಸ್ ಸಂಸ್ಥೆಯ ಪಿಕಪ್ ವಾಹನ ಫೆ.3 ರಂದು ಸಂಜೆ ಸುಮಾರು 5 ಗಂಟೆಗೆ ಗುರುವಾಯನಕೆರೆಯಿಂದ ಧರ್ಮಸ್ಥಳ ಕಡೆಗೆ ಗ್ಯಾಸ್ ಸಿಲಿಂಡರ್ ತುಂಬಿಸಿಕೊಂಡು ಚಾಲಕ ಆದರ್ಶ್ ಹೋಗುತ್ತಿದ್ದಾಗ ಬೆಳ್ತಂಗಡಿ-ಧರ್ಮಸ್ಥಳ ಹೆದ್ದಾರಿಯ ನೀರಚಿಲುಮೆ ಗ್ರೀನ್ ಪಾರ್ಕ್ ಲಾಡ್ಜ್ ಮುಂಭಾಗದಲ್ಲಿ ಎದುರಿನಿಂದ ವಿರುದ್ಧ ದಿಕ್ಕಿನಲ್ಲಿ ಆಟೋ ಬಂದಿದ್ದು, ಇದನ್ನು ತಪ್ಪಿಸುವಾಗ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿಯಾಗಿದೆ.

ಪಲ್ಟಿಯಾದ ರಭಸಕ್ಕೆ ಪಿಕಪ್ ವಾಹನದಲ್ಲಿದ್ದ ಗ್ಯಾಸ್ ಸಿಲಿಂಡರ್ ರಸ್ತೆಗೆ ಎಸೆಯಲ್ಪಟ್ಟಿದ್ದು. ಯಾವುದೇ ಹೆಚ್ಚಿನ ಅನಾಹುತ ಅಗಿಲ್ಲ. ತಕ್ಷಣ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪಿಕಪ್ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

- Advertisement -

Latest News

error: Content is protected !!