Wednesday, June 3, 2026
Homeಕರಾವಳಿಬಂಟ್ವಾಳದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿಗೆ ಸಿಲುಕಿ ದುರ್ಮರಣಕ್ಕೀಡಾದ ವೃದ್ಧ ದಂಪತಿ

ಬಂಟ್ವಾಳದಲ್ಲಿ ಕಸಕ್ಕೆ ಹಾಕಿದ್ದ ಬೆಂಕಿಗೆ ಸಿಲುಕಿ ದುರ್ಮರಣಕ್ಕೀಡಾದ ವೃದ್ಧ ದಂಪತಿ

- Advertisement -
- Advertisement -

ಬಂಟ್ವಾಳ: ಮನೆಯ ಸಮೀಪದ ಕಸಕ್ಕೆ ಹಾಕಿದ್ದ ಬೆಂಕಿಗೆ ಸಿಲುಕಿ ವೃದ್ಧ ದಂಪತಿ ಸಜೀವ ದಹನಗೊಂಡ ದುರ್ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ‌ ಬಳಿಯ ತುಂಡು ಪದವು ಎಂಬಲ್ಲಿ ಅನಾಹುತ ನಡೆದಿದ್ದು, ದಂಪತಿಗಳಾದ ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಮೃತಪಟ್ಟಿದ್ದಾರೆ.

ತುಂಡು ಪದವಿನಲ್ಲಿ ತಮ್ಮ ಮನೆಯ ಪಕ್ಕದಲ್ಲಿದ್ದ ಕಸಕ್ಕೆ ಹಾಕಿದ್ದ ಬೆಂಕಿ ಸ್ವಲ್ಪ ಹೊತ್ತಿನಲ್ಲಿ ಮನೆಯ ಪಕ್ಕದಲ್ಲೇ ಇರುವ ಕಾಡಿಗೂ ವ್ಯಾಪಿಸಿತ್ತು ಎನ್ನಲಾಗಿದೆ.

ಹೀಗಾಗಿ ಕಾಡಿಗೆ ಹಬ್ಬಿದ ಬೆಂಕಿಯನ್ನು ನಂದಿಸಲು ಪತಿ ಮತ್ತು ಪತ್ನಿ ಮುಂದಾಗಿದ್ದು,
ಈ ವೇಳೆ ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಹೋಗಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!