Sunday, June 7, 2026
Homeಕರಾವಳಿಪುತ್ತೂರಿನಲ್ಲೊಂದು ಮನ ಮಿಡಿಯುವ ಘಟನೆ; ಅಕ್ಕನ ಪ್ರಾಣ ಉಳಿಸಲು ಲಿವರ್ ನೀಡಿದ ತಂಗಿ; ತಂಗಿ ಲಿವರ್...

ಪುತ್ತೂರಿನಲ್ಲೊಂದು ಮನ ಮಿಡಿಯುವ ಘಟನೆ; ಅಕ್ಕನ ಪ್ರಾಣ ಉಳಿಸಲು ಲಿವರ್ ನೀಡಿದ ತಂಗಿ; ತಂಗಿ ಲಿವರ್ ನೀಡಿದರೂ ಬದುಕುಳಿಯಲಿಲ್ಲ ಅಕ್ಕ

- Advertisement -
- Advertisement -

ಪುತ್ತೂರಿನಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಅಕ್ಕನ ಪ್ರಾಣ ಉಳಿಸಲು ತಂಗಿ ಲಿವರ್ ನೀಡಿದರೂ ಅಕ್ಕ ಸಾವನ್ನಪ್ಪಿದ ಘಟನೆ ಪುತ್ತೂರಿನ ನೆಹರು ನಗರದಲ್ಲಿ ನಡೆದಿದೆ. ಐಶ್ವರ್ಯ (29) ಮೃತ ಯುವತಿ.

ನೆಹರು ನಗರದ ನಿವಾಸಿ ದಿವಂಗತ ಆನಂದ ನಾಯ್ಕ ಅವರ ಹಿರಿಯ ಪುತ್ರಿಯಾಗಿರುವ ಐಶ್ವರ್ಯ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭ ಆಕೆಯ (ಐಶ್ವರ್ಯಾ) ಲಿವರ್ ಡ್ಯಾಮೇಜ್ ಆಗಿದ್ದು, ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ತೀರ್ಮಾನಿಸಿದ್ದಾರೆ. ಈ ವೇಳೆ ಐಶ್ವರ್ಯ ತಂಗಿ ಅನುಷಾ ತನ್ನ ಲಿವರ್ ನೀಡಲು ಮಂದಾಗಿದ್ದಾಳೆ. ಆದರೆ ಅಷ್ಟರಲ್ಲಿ ಐಶ್ವರ್ಯಾ ಸಾವನ್ನಪ್ಪಿದ್ದಾರೆ.

ಸದ್ಯ ಐಶ್ವರ್ಯಾ ತಂಗಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಒಂದು ಕಡೆ ಹಿರಿಯ ಮಗಳನ್ನು ಕಳೆದುಕೊಂಡು ಕಿರಿಯ ಮಗಳು ಚಿಕಿತ್ಸೆ ಪಡೆಯುತ್ತಿದ್ದು ಮನೆಯವರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

- Advertisement -

Latest News

error: Content is protected !!