Friday, June 5, 2026
Homeಕರಾವಳಿಬಂಟ್ವಾಳ:  ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ:  ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ:  ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 7ರಂದು ಬಂಟ್ವಾಳ ಸಜೀಪನಡುವಿನಲ್ಲಿ ನಡೆದಿದೆ.ಪಶ್ಚಿಮಬಂಗಾಳ ಮೂಲದ ಕಾರ್ಮಿಕ ಶಂಭುದಾಸ್‌ (28) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಶಂಭುದಾಸ್ ಪಶ್ಚಿಮಬಂಗಾಳದ ಸುಲ್ತಾನ್‌ನಗರ ಸರ್ಯಾ ಪಾಲೆ ಕುನಿಯಾ ಪಹರ್‌ ನಿವಾಸಿ. ಆತ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಬಳಿಕ ಆ ಕೆಲಸ ಬಿಟ್ಟು ಸುಳ್ಯದಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದರು. ಅವರು ಕುಟುಂಬದ ಜತೆಗೆ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ನೆಲೆಸಿದ್ದರು.

ಅವರ ತಾಯಿ ಹಾಗೂ ಪತ್ನಿಯ ಮಧ್ಯೆ ಪ್ರತೀದಿನ ಗಲಾಟೆ ನಡೆಯುತ್ತಿದ್ದು, ಇದೇ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅವರ ತಮ್ಮ ಕೇಶವದಾಸ್‌ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!