Wednesday, June 3, 2026
Homeಕರಾವಳಿಮಂಗಳೂರು: ಕೈಕಂಬ ಬಳಿಯ ಪೊಳಲಿ ದ್ವಾರದ ಸಮೀಪ ಖಾಸಗಿ ಬಸ್ ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

ಮಂಗಳೂರು: ಕೈಕಂಬ ಬಳಿಯ ಪೊಳಲಿ ದ್ವಾರದ ಸಮೀಪ ಖಾಸಗಿ ಬಸ್ ಪಲ್ಟಿ; ಹಲವು ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಮಂಗಳೂರು: ಕೈಕಂಬ ಬಳಿಯ ಪೊಳಲಿ ದ್ವಾರ ಸಮೀಪ ಖಾಸಗಿ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ನಿನ್ನೆ ಸಂಜೆ 7.15ರ ಸುಮಾರಿಗೆ  ನಡೆದಿದೆ. ಈ ಘಟನೆಯಲ್ಲಿ ಬಸ್ಸಿನಲ್ಲಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ, ಹಲವರಿಗೆ ಗಾಯವಾಗಿದೆ ಎನ್ನಲಾಗುತ್ತಿದೆ.

ಖಾಸಗಿ ಬಸ್ ಪಲ್ಟಿಯಾದ ವಿಷಯ ತಿಳಿದ ಸ್ಥಳೀಯರು, ಬಸ್ಸಿನಲ್ಲಿ ಸಿಲುಕಿದ್ದ  ಪ್ರಯಾಣಿಕರನ್ನು ರಕ್ಷಣೆ ಮಾಡಿ, ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಪಲ್ಟಿಯಾದ ಖಾಸಗಿ ಬಸ್ ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ಅಂದಹಾಗೇ ಚಾಲನ ನಿಯಂತ್ರಣ ತಪ್ಪಿದ್ರೂ, ಸುಮಾರು 100 ಮೀಟರ್ ದೂರ ಬಸ್ ಚಾಲಕ ದೊಡ್ಡ ಅನಾಹುತ ಆಗದಂತೆ ಬಸ್ ನಿಧಾನವಾಗಿ ಪಲ್ಟಿಯಾಗುವಂತೆ ಜಾಗ್ರತೆ ವಹಿಸಿದ್ದಾನೆ ಎನ್ನಲಾಗಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.

- Advertisement -

Latest News

error: Content is protected !!