Saturday, June 13, 2026
Homeಕರಾವಳಿಉಡುಪಿಮಣಿಪಾಲದಲ್ಲಿ ಹೊಸವರ್ಷಾಚರಣೆ ವೇಳೆ ಪುಂಡಾಟ ಮೆರೆದಿದ್ದ ಯುವಕರ ಮೇಲೆ ಪ್ರಕರಣ ದಾಖಲು

ಮಣಿಪಾಲದಲ್ಲಿ ಹೊಸವರ್ಷಾಚರಣೆ ವೇಳೆ ಪುಂಡಾಟ ಮೆರೆದಿದ್ದ ಯುವಕರ ಮೇಲೆ ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ಡಿಸೆಂಬರ್ 31ರಂದು ತಡರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಣಿಪಾಲದಲ್ಲಿ ರಸ್ತೆ ಬಂದ್ ಆಗುವ ರೀತಿ ಪುಂಡಾಟ ನಡೆಸಿದ್ದ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಮಣಿಪಾಲದ ಡಿಸಿ ಕಚೇರಿ ರಸ್ತೆಯನ್ನು ಬ್ಲಾಕ್ ಮಾಡಿ ಬೈಕ್ ಸ್ಟಂಟ್ ನಡೆಸಿ ಹುಚ್ಚಾಟ ಮೆರೆದಿದ್ದ ಯುವಕರು ವೀಡಿಯೋ ಚಿತ್ರೀಕರಣವನ್ನೂ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ‌ಬಿಟ್ಟಿದ್ದರು.

ವೀಡಿಯೋ ಆಧರಿಸಿ ಬೈಕ್ ಗಳನ್ನು ವಶಕ್ಕೆ ಪಡೆದಿರುವ ಮಣಿಪಾಲ ಠಾಣೆ ಪೊಲೀಸರು ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮಣಿಪಾಲ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ಪುಂಡಾಟ ಮೆರೆದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಯುವಕರ ಮನೆಯವರನ್ನೂ ಕರೆಸಿ ಪೋಷಕರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

- Advertisement -

Latest News

error: Content is protected !!