Friday, June 5, 2026
Homeಅಪರಾಧಶಿವಮೊಗ್ಗ ಏರ್​​ಪೋರ್ಟ್​​​​ ಕಾಮಗಾರಿ ನಿರ್ವಹಿಸಿದ್ದ ನ್ಯಾಷನಲ್ ಸಂಸ್ಥೆ ಮೇಲೆ ಇಡಿ ದಾಳಿ

ಶಿವಮೊಗ್ಗ ಏರ್​​ಪೋರ್ಟ್​​​​ ಕಾಮಗಾರಿ ನಿರ್ವಹಿಸಿದ್ದ ನ್ಯಾಷನಲ್ ಸಂಸ್ಥೆ ಮೇಲೆ ಇಡಿ ದಾಳಿ

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಏರ್​​ಪೋರ್ಟ್​​​​ ಕಾಮಗಾರಿ ನಿರ್ವಹಿಸಿದ್ದ ನ್ಯಾಷನಲ್ ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ತೀರ್ಥಹಳ್ಳಿಯ ಸುಲೈಮಾನ್ ಎಂಬುವರಿಗೆ ಸೇರಿದ ನ್ಯಾಷನಲ್ ಸಂಸ್ಥೆ ಇದಾಗಿದೆ. ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್ ಹಾಗೂ ಸುಲೈಮಾನ್ ಅವರ ಮನೆ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನು ತಾಲೂಕಿನ ಹಾಗೂ ರಾಜ್ಯದ ಹಲವೆಡೆ ರಸ್ತೆಯ ಕಾಮಗಾರಿಗಳನ್ನು ಈ ಸಂಸ್ಥೆಯೇ ನಡೆಸುತ್ತಿದೆ. ಆದರೆ ಸಂಸ್ಥೆಯ ಹಣದ ವಿಚಾರದಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಈ ನ್ಯಾಷನಲ್ ಸಂಸ್ಥೆಯು ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮಾಡಿದ್ದಾರೆ. ಅದರಲ್ಲೂ ಹೈವೇ ಮತ್ತು ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಯನ್ನೂ ಈ ಕಂಪನಿಯೇ ನಡೆಸುತ್ತಿದೆ.

- Advertisement -

Latest News

error: Content is protected !!