Friday, June 5, 2026
Homeಕರಾವಳಿಉಡುಪಿಹಿಜಾಬ್ ಗೆ ಅವಕಾಶ ಕೊಟ್ಟರೆ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು,  ಲುಂಗಿ ಧರಿಸಿ...

ಹಿಜಾಬ್ ಗೆ ಅವಕಾಶ ಕೊಟ್ಟರೆ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು,  ಲುಂಗಿ ಧರಿಸಿ ಬರುತ್ತಾರೆ;ವಿಹಿಂಪ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಹೇಳಿಕೆ

- Advertisement -
- Advertisement -

ಉಡುಪಿ: ಯಾವುದೇ ಕಾರಣಕ್ಕೂ ಶಾಲಾ ಕಾಲೇಜುಗಳ ಒಳಗೆ ಹಿಜಾಬ್ ಧರಿಸುವುದನ್ನು ಒಪ್ಪುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಹೇಳಿದ್ದಾರೆ.

ಹಿಜಾಬ್ ಕುರಿತ ಆದೇಶ ವಾಪಸ್ ಪಡೆಯುವ ಸಿಎಂ ಹೇಳಿಕೆ ಬಗ್ಗೆ ಉಡುಪಿಯಲ್ಲಿ ಮಾತನಾಡಿದ ದಿನೇಶ್ ಮೆಂಡನ್, ಶಾಲಾ ಆವರಣದ ಹೊರಗೆ ಏನು ಬೇಕಾದರೂ ಧರಿಸಲಿ ಆದರೆ ಶಾಲಾ ಆವರಣದೊಳಗೆ ಹಿಜಾಬ್ ಹಾಕಿಕೊಂಡು ಬಂದು ಜಾತಿ ತರಬೇಡಿ ಎಂದು ಹೇಳಿದ್ದಾರೆ.

ಹಿಜಾಬ್ ಹಾಕಲು ಅವಕಾಶ ಕೊಟ್ಟರೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಬಟ್ಟೆ ಹಾಕುತ್ತಾರೆ, ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು ಮತ್ತು ಕೇಸರಿ ಲುಂಗಿ ತೊಟ್ಟು ಬರುತ್ತಾರೆ ಎಂದು ದಿನೇಶ್ ಮೆಂಡನ್ ಹೇಳಿದ್ದಾರೆ.

ಅಲ್ಲದೇ, ಕೇಸರಿ ಬಟ್ಟೆಗೂ ತರಗತಿಯೊಳಗೆ ಅವಕಾಶ ಕೊಡಿ ಎಂದಿರುವ ದಿನೇಶ್ ಮೆಂಡನ್, ಚುನಾವಣೆ ಬರುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!