Friday, June 5, 2026
Homeಕರಾವಳಿಬೆಳ್ತಂಗಡಿ; ಜಮೀನಿಗೆ ನುಗ್ಗಿ ಬೆದರಿಕೆ ಹಾಕಿ ಅಡಿಕೆ ಕಳ್ಳತನ

ಬೆಳ್ತಂಗಡಿ; ಜಮೀನಿಗೆ ನುಗ್ಗಿ ಬೆದರಿಕೆ ಹಾಕಿ ಅಡಿಕೆ ಕಳ್ಳತನ

- Advertisement -
- Advertisement -

ಬೆಳ್ತಂಗಡಿ; ಜಮೀನಿಗೆ ನುಗ್ಗಿ ಬೆದರಿಕೆ ಹಾಕಿ ಅಡಿಕೆ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಟಿ ಕೆ ಮಾಧ್ಯು ಸ್ವಾನ ಪತ್ನಿ ಶ್ರೀಮತಿ ಎ ಸಿ ಎಲಿಯಮ್ಮ ಅವರು ಡಿ. 23 ರಂದು ಬೆಳಗ್ಗೆ ಸೊಸೆಯೊಂದಿಗೆ ಅಡಿಕೆ  ತೋಟಕ್ಕೆ ಹೋಗಿ  ಅಡಿಕೆಯನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿದ್ದಾಗ, ಟಿ.ಆರ್ ಮೋಹನ, ತಂಗಮಣಿ, ವಾಸು, ಲತಾ,ವಾಸು ರವರ ಮಗಳು , ವಿಶ್ವನಾಥ, ರವಿ, ರತೀಶಗೌಡ, ರಾಧಾಕೃಷ್ಣ, ಪುರಂದರ್ ರಾವ್,ಸುರೇಶ್ ಎನ್.ಕೆ, ಲತಿಕ, ರೇಖ, ಸುಧಾಕರ, ಆನಂದ ಗೌಡ ಬಿನ್ ಲಿಂಗಪ್ಪ ಗೌಡು, ಗಂಗಾಧರ, ಮಹೇಶ್ ಪೂಜಾರಿ,ರಾಜೇಶ್,ನವೀನ್ ನೆರಿಯ, ಪ್ರಭನ್ ಯಾನೆ ಪ್ರಭಾಕರ ಎಂಬವರುಗಳು ವಾಹನಗಳಲ್ಲಿ ಬಂದು ಎಸಿ ಎಲ್ಲಿಯಮ್ಮರ ಸೊಸೆಯನ್ನು ಸುತ್ತುವರಿದು, ಹಲ್ಲೆ ಮಾಡಿ ಜಮೀನಿಗೆ ಹಾಕಿದ ಬೇಲಿಯನ್ನು ಪುಡಿ ಮಾಡಿ ಎಲಿಯಮ್ಮ ಅವರ ಸೊಸೆಯನ್ನು ಬೆದರಿಸಿ, ಸುಮಾರು ಹತ್ತರಷ್ಟು ಕಾಂಕ್ರೀಟ್‌ ಬೇಲಿಯ ಕಂಬಗಳನ್ನು ಅವರು ತಂದಿದ್ದ ಟೆಂಪೋದಲ್ಲಿ ಹಾಗೂ ಸುಮಾರು 20 ಕೆಜಿಯಷ್ಟು ಬೇಲಿಯನ್ನು ಕಾರಿನಲ್ಲಿ ಹಾಗೂ ಒಂದು ಗೋಣಿ ಅಡಿಕೆಯ ಆರೋಪಿ ರತೀಶ್‌ ಗೌಡನ ಕಾರಿನಲ್ಲಿ ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಎಲಿಯಮ್ಮ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 143, 147, 341, 323, 427, 395,  ಜೊತೆಗೆ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಪ್ರಕರಣದ  ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!