Thursday, June 4, 2026
Homeಕರಾವಳಿಸುಳ್ಯ:ಮಾತಿಗೆ ಮಾತು ಬೆಳೆದು ಕತ್ತಿಯಿಂದ ಪರಸ್ಪರ ಹೊಡೆದಾಡಿಕೊಂಡ ನೆರೆ ಹೊರೆಯ ಮನೆಯವರು; ಆಸ್ಪತ್ರೆಗೆ ಸೇರಿಸಲು ಯಾರೂ...

ಸುಳ್ಯ:ಮಾತಿಗೆ ಮಾತು ಬೆಳೆದು ಕತ್ತಿಯಿಂದ ಪರಸ್ಪರ ಹೊಡೆದಾಡಿಕೊಂಡ ನೆರೆ ಹೊರೆಯ ಮನೆಯವರು; ಆಸ್ಪತ್ರೆಗೆ ಸೇರಿಸಲು ಯಾರೂ ಇಲ್ಲದೇ 12 ಗಂಟೆ ನರಳಾಡಿದ ವೃದ್ಧ ದಂಪತಿ

- Advertisement -
- Advertisement -

ಸುಳ್ಯ: ಮಾತಿಗೆ ಮಾತು ಬೆಳೆದು ಕತ್ತಿಯಿಂದ ಪರಸ್ಪರ ನೆರೆ ಹೊರೆಯ ಮನೆಯವರು ಹೊಡೆದಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕುಡೆಂಬಿ ಎಂಬಲ್ಲಿ ನಿನ್ನೆ ರಾತ್ರಿ ರಾಮಣ್ಣ ನಾಯ್ಕ ಮತ್ತು ಕಮಲಾಕ್ಷ ನಾಯ್ಕ ಎಂಬುವವರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ.ಈ ವೇಳೆ ಎರಡೂ ಮನೆಯವರು ಕತ್ತಿಯಿಂದ ಕಡಿದುಕೊಂಡಿದ್ದು ಎರಡೂ ಕಡೆಯವರಿಗೆ ಗಾಯಗಳಿವೆ. ಅದರಲ್ಲಿ ಕಮಲಾಕ್ಷ ನಾಯ್ಕ್ ನಿನ್ನೆಯೇ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ  ರಾಮಣ್ಣ ನಾಯ್ಕ ಮತ್ತು ಅವರ ಪತ್ನಿ ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದೇ ರಾತ್ರಿಯಿಡೀ ನೋವಿಲ್ಲ ಒದ್ದಾಡಿದ್ದಾರೆ. ಇಂದು ರಾಮಣ್ಣ ಅವರ ಪತ್ನಿ ಸುಮಾರು ಅರ್ಧ ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಅಲ್ಲಿದ್ದವರ ಸಹಾಯ ಕೇಳಿ 108 ಅಂಬ್ಯುಲೆನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!