Sunday, June 7, 2026
Homeಕರಾವಳಿಸುಳ್ಯ:ಅಯ್ಯಪ್ಪ ಮಾಲಾಧಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಳ್ಯ:ಅಯ್ಯಪ್ಪ ಮಾಲಾಧಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಸುಳ್ಯ:ಅಯ್ಯಪ್ಪ ಮಾಲಾಧಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಮರ್ಕಂಜದ ಸೇವಾಜೆ ಎಂಬಲ್ಲಿ ನಡೆದಿದೆ. ಹೊನ್ನಪ್ಪ ದೇವ ಎಂಬವರ ಪುತ್ರ ಪದ್ಮನಾಭ (30 ) ಆತ್ಮಹತ್ಯೆ ಮಾಡಿಕೊಂಡವರು.

ಪದ್ಮನಾಭ ಅವರು ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿ ವೃತಚಾರಣೆಯಲ್ಲಿದ್ದರು.  ಇಂದು ಆಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹವನ್ನು ಪೊಲೀಸ್ ಮಹಜರು ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೌಟುಂಬಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭಿಸಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!